ಕರ್ನಾಟಕಪ್ರಮುಖ ಸುದ್ದಿ

ಶ್ರೀ ಸಿದ್ದೇಶ್ವರ ಸೇವಾ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಮಾಸ್ಕ್ ವಿತರಣೆರಾಜ್ಯ(ಮಂಡ್ಯ)ಅ.19:- ಕೊರೋನಾ ವೈರಾಣು (ಕೋವಿಡ್-19) ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಮಂಡ್ಯ ತಾಲೂಕಿನ ಸೂನಹಳ್ಳಿ ಗ್ರಾಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ‘ಭೂತನಹೊಸೂರು ಗ್ರಾಮ’ದಲ್ಲಿ ‘ಶ್ರೀ ಸಿದ್ದೇಶ್ವರ ಸೇವಾ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ’ ಮುಖಗವಸು (ಮಾಸ್ಕ್’ಗಳನ್ನು) ಭಾನುವಾರ ಗ್ರಾಮದ ಜನತೆಗೆ ವಿತರಿಸಲಾಯಿತು.
ಟ್ರಸ್ಟ್ ಸದಸ್ಯರು ವಿಶೇಷ ಮುತುವರ್ಜಿ ವಹಿಸಿ ಗ್ರಾಮದ ಎಲ್ಲ ಮನೆಗಳಿಗೂ ಯಶಸ್ವಿಯಾಗಿ ಮಾಸ್ಕ್ ಗಳನ್ನು ವಿತರಿಸಿದರು.
ಶ್ರೀ ಸಿದ್ದೇಶ್ವರ ಸೇವಾ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್’ ಸದಸ್ಯರಾದ ಯತೀಶ್, ಜಗದೀಶ್, ಬೋರೇಗೌಡ, ಜಯರಾಮ ಅವರುಗಳು, ಮತ್ತು ಗ್ರಾಮದ ಯಜಮಾನರಾದ ಶಿವರಾಮ್, ಗ್ರಾಮಸ್ಥರಾದ ರೇವಣ್ಣ, ಭೂತನ ಹೊಸೂರು ವ್ಯ.ಸೇ.ಸ.ಸಂಘದ ಸದಸ್ಯರಾದ ಶಿವರಾಮ್ ಅವರುಗಳು ಈ ಮಾಸ್ಕ್ ವಿತರಣೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಟ್ರಸ್ಟ್ ಉಪಾಧ್ಯಕ್ಷರಾದ ಶೇಖರ್ ಶಿವರಾಮ್ ಅವರು ಮಾಸ್ಕ್’ಗಳ ವ್ಯವಸ್ಥೆ ಮಾಡಿದ್ದು, ಅವರಿಗೆ ಟ್ರಸ್ಟ್ ಹಾಗೂ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಟ್ರಸ್ಟ್’ನ ಸರ್ವ ಸದಸ್ಯರೂ ತಿಳಿಸಿರುತ್ತಾರೆ. ಮಾಸ್ಕ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿ ಸಹಕರಿಸಿದ ಎಲ್ಲರಿಗೂ ಟ್ರಸ್ಟ್ ಸದಸ್ಯರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಿಂದ ಗ್ರಾಮದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಟ್ರಸ್ಟ್’ನ ಪ್ರಯತ್ನ ಯಶಸ್ವಿಯಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದಾರೆ. ಮುಂದೆಯು ಸಹ ಆಗಾಗ ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ತಿಳಿವಳಿಕೆ ಮೂಡಿಸಲಿ ಎಂದು ಗ್ರಾಮಸ್ಥರು ಹಾರೈಸಿದರು.(ಎನ್.ಬಿ, ಎಸ್.ಎಚ್)

Leave a Reply

comments

Related Articles

error: