ಮೈಸೂರು

ಸಾಮಾನ್ಯ ಕಾರ್ಯಕರ್ತ ತನ್ನ ಸಂಕಲ್ಪದಿಂದ ಅಸಾಮಾನ್ಯನಾಗಿ ಬೆಳೆಯಬಹುದು ಎನ್ನುವುದು ತೋರಿಸಿಕೊಟ್ಟಿದ್ದು ಭಾರತೀಯ ಜನತಾ ಪಕ್ಷ : ಸಿ.ಹೆಚ್.ವಿಜಯ್ ಶಂಕರ್ ಬಣ್ಣನೆ


ಮೈಸೂರು,ಅ.19:- ಸಾಮಾನ್ಯ ಕಾರ್ಯಕರ್ತ ತನ್ನ ಸಂಕಲ್ಪದಿಂದ ಅಸಾಮಾನ್ಯನಾಗಿ ಬೆಳೆಯಬಹುದು ಎನ್ನುವುದು ತೋರಿಸಿಕೊಟ್ಟ ಪಕ್ಷ ಬಿಜೆಪಿ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಬಣ್ಣಿಸಿದರು.
ಅವರಿಂದು ರಾಮಕೃಷ್ಣನಗರದಲ್ಲಿರುವ ಹೋಟೆಲ್ ನೀಲಾಂಜನ ಮಹೇಶಪ್ರಸಾದ್ ನಲ್ಲಿ ನಡೆದ ಭಾರತೀಯ ಜನತಾಪಾರ್ಟಿ ಚಾಮುಂಡೇಶ್ವರಿ ಕ್ಷೇತ್ರ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚಾಮುಂಡೇಶ್ವರಿ ಎಂದ ತಕ್ಷಣ ಉತ್ತರ ನನಗೆ ನೆನಪಾಗುವುದು. ವೈಷ್ಣೋದೇವಿ. ಭಾರತದ ತುತ್ತ ತುದಿಯಲ್ಲಿರುವ ವೈಷ್ಣೋದೇವಿ ದರ್ಶನಕ್ಕೆ ಹೊಗಿದ್ದೆ. ಅಲ್ಲಿಯ ಸೈನಿಕನೋರ್ವ ನನ್ನನ್ನ ಕೇಳಿದ. ಎಲ್ಲಿಂದ ಬಂದಿದ್ದೀರಿ ಎಂದು, ಮೈಸೂರಿನಿಂದ ಅಂದ ತಕ್ಷಣ ತಾಯಿ ಚಾಮುಂಡೇಶ್ವರಿಯ ನಾಡಿನಿಂದ ಬಂದಿದ್ದೀರಾ ಅಂತ ಕೇಳಿದ ಎಂದು ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದರು.
ನವರಾತ್ರಿಯ ಸಮಯದಲ್ಲಿ ಸಾತ್ವಿಕ ಶಕ್ತಿಗಳು ಜಾಗೃತವಾಗಲಿದೆ. ತಾಯಿ ದುರ್ಗೆಯಾಗಿ ದುಷ್ಟಶಕ್ತಿಯನ್ನು ನಾಶಮಾಡಿ, ಮನುಕುಲವನ್ನು ಉದ್ಧರಿಸುವ ದಿನಗಳು, 9ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ತಾಯಿ ಆರಾಧನೆ ಮಾಡುತ್ತೇವೆ. ತಾಯಿಗೆ ಶರಣಾಗುತ್ತೇವೆ. ಅವಳ ಅನುಗ್ರಹ ಪ್ರಾಪ್ತವಾಗಲಿ, ಅಂತ ಪೂರ್ಣವಾಗಿ ಶರಣಾಗತಾರಾಗುತ್ತೇವೆ. ಸದಾ ಕಾಲ ಕೂಡ ಅವಳ ಅನುಗ್ರಹ ನಾಡಿಗೆ ಪ್ರಾಪ್ತಿಯಾಗಲಿ. ಅವಳ ಕೃಪೆಯಿಂದ ನಾಡಿನಲ್ಲಿ ಸದಾ ಸಂತೋಷ ನೆಮ್ಮದಿ ಕಾಣುವ ದಿನಗಳು ಲಭ್ಯವಾಗಲಿ ಎಂದು ಪ್ರಾರ್ಥಿಸುತ್ತೇವೆ. ನವರಾತ್ರಿಯ ದಿನಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಕಾರ್ಯಕಾರಿಣಿ ನಡೆಯುತ್ತಿದೆ. ಕಾರ್ಯಕಾರಿಣಿಯಲ್ಲಿ ಅಖಂಡ ಭಾರತದ ಪರಿಕಲ್ಪನೆ ಇದೆ. ಇಡೀ ಭಾರತವನ್ನು ಅಲಂಕರಿಸಿದವಳು ತಾಯಿ ದುರ್ಗೆ, ಅವಳ ಅನುಗ್ರಹ ದೇಶಕ್ಕೆ ಇದೆ.ತಾಯಿ ಭಾರತ ಮಾತೆ ನಿತ್ಯ ಸುಮಂಗಲಿಯಾಗಬೇಕು. ಗತ ವೈಭವಗಳು ಮತ್ತೆ ಮರುಕಳಿಸಬೇಕು. ಶಕ್ತಿಶಾಲಿ, ಸಮೃದ್ಧ ಭಾರತವಾಗಿ ಹೊರಹೊಮ್ಮಬೇಕು ಎಂದರು.
ಭಾರತೀಯ ಜನತಾ ಪಕ್ಷ ಒಗ್ಗಟ್ಟಿನ ಸಂಘಟನೆ. ನಾವೆಲ್ಲ ಒಂದು ಎಂಬ ಭಾವನೆಯಿಲ್ಲದ ಕಾರಣ ಅನೇಕ ದಾಳಿ ನಡೆಯಿತು. ತ್ಯಾಗ, ಪರಿಶ್ರಮದ ಪರಿಣಾಮ ಭಾರತ ಸ್ವತಂತ್ರವಾಯಿತು. ಸ್ವತಂತ್ರ ಭಾರತ ಒಂದಾಗಬೇಕೆಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸಂಕಲ್ಪ ತೊಟ್ಟು ಮುನ್ನೆಡದ ಸಂಘಟನೆ ಭಾರತೀಯ ಜನತಾಪಕ್ಷ. ಕಾರ್ಯಕರ್ತರ ಬಲದ ಮೇಲೆ ಸಂಘಶಕ್ತಿಯ ಬಲದ ಮೇಲೆ ದೇಶದಲ್ಲಿ ಕಾಣಲು ಸಾಧ್ಯವಾಗಿದ್ದು ಬಿಜೆಪಿಯಿಂದ ಎಂದರು
ಜೆಡಿಎಸ್ ವ್ಯಕ್ತಿಗತ ಸಂಘಟನೆ, ಕುಟುಂಬ ಆಧಾರಿತ ಸಂಘಟನೆ ಕಾಂಗ್ರೆಸ್, ಸಾಮಾನ್ಯ ಕಾರ್ಯಕರ್ತತನ್ನ ಸಂಕಲ್ಪದಿಂದ ಅಸಾಮಾನ್ಯನಾಗಿ ಬೆಳೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದು ಭಾರತೀಯ ಜನತಾ ಪಕ್ಷ. ಸಂಘಟನೆ ನೀಡಿದ ಜವಾಬ್ದಾರಿ ಚಾಚೂ ತಪ್ಪದೆ ನಿರ್ವಹಿಸುವವನು ಕಾರ್ಯಕರ್ತ. ಈತ ಸಂಘಟನೆ ಮತ್ತು ಸಮುದಾಯದ ಸೇತುವೆ. ಎರಡೂ ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸುವವನು. ನಮ್ಮ ವಿಚಾರಗಳನ್ನು, ಸಂಘಟನೆಯ ಧ್ಯೇಯ ಉದ್ಧೇಶಗಳನ್ನು ತಿಳಿಸಿಹೇಳಿ, ಸಮುದಾಯದ ವಿಶ್ವಾಸ ಗಳಿಸಿ, ಸಮುದಾಯದ ಜೊತೆ ಜೋಡಿಸುವಂಥದ್ದು ಕಾರ್ಯಕರ್ತನ ಜವಾಬ್ದಾರಿ ಎಂದು ತಿಳಿಸಿದರು.
ಬೇರೆ ಸಂಘಟನೆಗೂ ಬಿಜೆಪಿಗೂ ಇರುವ ವ್ಯತ್ಯಾಸವೇನೆಂದರೆ ಬಿಜೆಪಿ ಹೇಳಿ ಕೊಡುವ ಮೊದಲ ಪಾಠ, ವ್ಯಕ್ತಿಗಿಂತ ಸಂಘಟನೆ ದೊಡ್ಡದು, ಸಂಘಟನೆಗಿಂತ ದೇಶ ದೊಡ್ಡದು. ದೇಶಕ್ಕಾಗಿ ಸಂಘಟನೆ, ದೇಶದ ಹಿತಕ್ಕಾಗಿ ಏನು ಬೇಕಾದರೂ ಮಾಡಲೂ ಸಾಧ್ಯ ಎನ್ನುವ ಸಂಘಟನೆ ಇರುವುದು ಬಿಜೆಪಿಯಲ್ಲಿ ಮಾತ್ರ. ಅಧಿಕಾರ ಮುಖ್ಯವಲ್ಲ, ದೇಶಮುಖ್ಯ. ಬಿಜೆಪಿ ಸಿದ್ಧಾಂತ ಆಧಾರಿತ ಸಂಘಟನೆ ಎಂದು ವಿವರಿಸಿದರು.
ಕಾರ್ಯಕಾರಿಣಿಯ ಮುಖ್ಯ ಉದ್ದೇಶ ಆತ್ಮಾವಲೋಕನ, ಸಿಂಹಾವಲೋಕನದ ಸಭೆ. ಜನ ಬಿಜೆಪಿ ಸಂಘಟನೆಯನ್ನು ಒಪ್ಪಿಕೊಂಡಿದ್ದಾರೆ. ರಾಜ್ಯ, ದೇಶದಲ್ಲಿ ಆಡಳಿತ ಬಿಜೆಪಿ ಕೈಲಿದೆ. ಜನರು ಒಪ್ಪಿಕೊಂಡಿದ್ದಾರೆ. ಸಮಾಜದಲ್ಲಿ ಆದರ್ಶವಾಗಿ ಗುರುತಿಸಿಕೊಳ್ಳುವ ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿದ್ದು, ಆ ಸಂಘಟನೆಯ ರೂವಾರಿಗಳು ಕಾರ್ಯಕರ್ತರು. ವ್ಯವಸ್ಥಿತವಾಗಿ ಗೆಲ್ಲುವುದು ಹೇಗೆ? ಎಲ್ಲಿ ವ್ಯತ್ಯಾಸಗಳಾಗುತ್ತವೆ ಎನ್ನುವುದನ್ನು ತಿಳಿದು ಗೆಲುವಿಗೆ ಶ್ರಮಿಸಬೇಕು. ಯೋಗ್ಯ ಕಾರ್ಯಕರ್ತರ ಪಡೆಯನ್ನು ಕಟ್ಟೋಣ. ವಸುದೈವ ಕುಟುಂಬಕಂ, ಎನ್ನುವ ಆದರ್ಶ ನಮ್ಮದು, ಇಡೀ ಜಗತ್ತಿನ ಮನುಕುಲ ನಮ್ಮದು ಎನ್ನುವ ಭಾವನೆಯನ್ನು ಬೆಳೆಸಬೇಕು. ಆ ಜೀವನದ ಪದ್ಧತಿಯನ್ನು ಮೌಲ್ಯವನ್ನು ಜಗತ್ತಿಗೆ ನಾವು ಹೇಳಿಕೊಡಬೇಕು. ಆ ರೀತಿಯ ಸಂಸ್ಕೃತಿ ಹೊಂದಿದ ಕಾರ್ಯಕರ್ತರ ಪಡೆ ನಮ್ಮದಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮವನ್ನು ನಗರಾಧ್ಯಕ್ಷ ಟಿ.ಶ್ರೀವತ್ಸ ಉದ್ಘಾಟಿಸಿದರು. ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ಪ್ರತಾಪ್ ಸಿಂಹ, ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್, ಮಂಡಲದ ಅಧ್ಯಕ್ಷ ಬಿ.ಎಂ.ರಘು, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಜಿಲ್ಲಾ ಪ್ರಭಾರಿ ಹಿರೇಂದ್ರ ಶಾ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಬ್ಬನಹಳ್ಳಿ ಕೃಷ್ಣ, ಪಾಲಿಕೆ ಸದಸ್ಯೆ ಲಕ್ಷ್ಮಿ ಕಿರಣ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ರಾಜಮಣಿ, ಈರೇಗೌಡ, ಉಪಾಧ್ಯಕ್ಷ ರಾಕೇಶ್ ಭಟ್, ಗಿರೀಶ್ ದಟ್ಟಗಳ್ಳಿ, ಕಾರ್ಯಾಲಯ ಕಾರ್ಯದರ್ಶಿ ಶಶಿಕಾಂತ್, ಮುಖಂಡರಾದ ಶುಭಾಶ್ರೀ, ಗೀತ ಮಹೇಶ್, ಸ್ಟೀಫನ್ ಸುಜಿತ್, ಭಾಗ್ಯಲತ, ಹೇಮಂತ್, ರಾಚಪ್ಪಾಜಿ ಸೇರಿದಂತೆ 100 ಜನ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: