ಮೈಸೂರು

ಮೈಸೂರು ವಿವಿಯ 100ನೇ ಘಟಿಕೋತ್ಸವ: 7 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ, ನಗದು ಬಹುಮಾನ ಪ್ರದಾನ

ಮೈಸೂರು,ಅ.19- ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಏಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ವರ್ಣ ಪದಕ ಹಾಗೂ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಂದು ಕ್ರಾಫರ್ಡ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆಗೈದಿರುವ ಏಳು ಸ್ನಾತಕೋತ್ತರ  ಪದವಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಹಾಗೂ ನಗದು ಬಹುಮಾನವನ್ನು ಪ್ರದಾನ ಮಾಡಲಾಯಿತು.

ಎಂಎ ಕನ್ನಡದಲ್ಲಿ ಮೂವರು ವಿದ್ಯಾರ್ಥಿಗಳು, ಎಂಎಸ್ ಸಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಎಂಎ ಅರ್ಥಶಾಸ್ತ್ರ ಹಾಗೂ ಎಂಬಿಎ ನಲ್ಲಿ ತಲಾ ಒಬ್ಬರು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಎಂಎ ಕನ್ನಡದಲ್ಲಿ ಸುನೀತಾ 7 ಚಿನ್ನದ ಪದಕ, 5 ನಗದು ಬಹುಮಾನ, ಪಿ.ರೇಣುಕಾ 6 ಚಿನ್ನದ ಪದಕ, 5 ನಗದು ಬಹುಮಾನ, ಕೆ.ಜಿ.ಕೆಂಪರಾಜು 6 ಚಿನ್ನದ ಪದಕ, 4 ನಗದು ಬಹುಮಾನ ಪಡೆದುಕೊಂಡು ಸಂಭ್ರಮಿಸಿದರು.

ಎಂಎಸ್ ಸಿ ರಸಾಯನಶಾಸ್ತ್ರದಲ್ಲಿ ಆರ್.ರೂಪಿಣಿ 11 ಚಿನ್ನದ ಪದಕ, 2 ನಗದು ಬಹುಮಾನ, ಎಂಎಸ್ ಸಿ ಸಸ್ಯಶಾಸ್ತ್ರದಲ್ಲಿ ಎಂ.ಜೆ.ಶಾಲಿನಿ 7 ಚಿನ್ನದ ಪದಕ, 3 ನಗದು ಬಹುಮಾನ ಪಡೆದುಕೊಂಡರು.

ಎಂಎ ಅರ್ಥಶಾಸ್ತ್ರದಲ್ಲಿ ಆರ್.ಧನಲಕ್ಷ್ಮೀ 9 ಚಿನ್ನದ ಪದಕ, 4 ನಗದು ಬಹುಮಾನ ಪಡೆದುಕೊಂಡರೆ, ಎಂಬಿಎ ನಲ್ಲಿ ಮತಂ ತೇಜಸ್ವಿನಿ 5 ಚಿನ್ನದ ಪದಕ ಪಡೆದುಕೊಂಡರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: