ಕರ್ನಾಟಕಪ್ರಮುಖ ಸುದ್ದಿ

ಕ್ಯಾಶ್ ಲೆಸ್ ಗೆ ರಾಜ್ಯ ಸಾರಿಗೆ ಇಲಾಖೆ ಚಿಂತನೆ

ಬೆಂಗಳೂರು: ನೋಟ್‌ ಬ್ಯಾನ್‌‌‌ನಿಂದಾಗಿ ಈಗ ಎಲ್ಲೆಡೆ ಕ್ಯಾಶ್‌‌‌ಲೆಸ್ ವ್ಯವಸ್ಥೆಯದ್ದೇ ಮಾತು. ಇದೀಗ ಈ ಸಾಲಿಗೆ ರಾಜ್ಯ ಸಾರಿಗೆ ಇಲಾಖೆ ಕೂಡ ಸೇರ್ಪಡೆಯಾಗುತ್ತಿದೆ.

ಇನ್ನು ಮುಂದೆ ಕೆಎಸ್ಆರ್‌‌‌ಟಿಸಿ ಬಸ್‌‌‌ಗಳನ್ನು ಕ್ಯಾಶ್‌‌ಲೆಸ್ ಆಗಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದ್ದು, ಪೇಟಿಎಂ ಸಂಸ್ಥೆ ಸಹಭಾಗಿತ್ವದಲ್ಲಿ ಈ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ಕೆಎಸ್ಆರ್‌‌‌ಟಿಸಿ ಈಗಾಗಲೇ ದೇಶದ ಆನ್‌‌ಲೈನ್ ಉದ್ಯಮದಲ್ಲಿ ಹೆಸರು ಮೂಡಿಸಿರುವ ಪೇಟಿಎಂ ಜೊತೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಸಾರಿಗೆ ಇಲಾಖೆಯ‌ ಬಸ್‌‌‌ಗಳಲ್ಲೂ ಕ್ಯಾಶ್‌‌ಲೆಸ್ ಆಗಿ ಸಂಚರಿಸಬಹುದು. ಇದೀಗ ಪ್ರಾಯೋಗಿಕವಾಗಿ ನಗರದ ಸ್ಯಾಟ್‌‌ಲೈಟ್ ಬಸ್‌‌‌ಸ್ಟಾಪ್‌‌ನಲ್ಲಿ ಈ ಕ್ಯಾಶ್‌‌ಲೆಸ್ ಪೇಟಿಎಂ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಯಾಟ್‌‌ಲೈಟ್ ಬಸ್ ನಿಲ್ದಾಣದಲ್ಲಿ ಪೇಟಿಎಂ ಕೇಂದ್ರ ತೆರೆಯಲಾಗಿದೆ. ಇಲ್ಲಿ ಪ್ರಯಾಣಿಕರು ತಾವು ತೆರಳುವ ದೂರ ಹಾಗೂ ತೆರಳಬೇಕಾದ ಜಾಗ ಹೇಳಿ ಟಿಕೆಟ್ ದರದ ಹಣವನ್ನು ತಮ್ಮ ಪೇಟಿಎಂ ಮೂಲಕ ವರ್ಗಾಯಿಸಿಕೊಂಡು ಅದಕ್ಕೆ ರಶೀದಿ ಪಡೆದು ಆ ರಶೀದಿಯನ್ನು ನಿರ್ವಾಹಕರಿಗೆ ತೋರಿಸಿದರೆ ಅವರು ಟಿಕೇಟ್ ನೀಡುತ್ತಾರೆ. ಇನ್ನು ಇದೇ ವಿಧಾನದಲ್ಲಿ ಮಾಸಿಕ ಪಾಸ್ ಅನ್ನು ಕೂಡಾ ಪಡೆಯಬಹುದಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: