ಮೈಸೂರು

ಪರಿಶಿಷ್ಟಪಂಗಡದ ಶೆ.7.5 ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿಧರಣಿ

ಮೈಸೂರು,ಅ.20:- ಪರಿಶಿಷ್ಟಪಂಗಡದ ಶೆ.7.5 ಮೀಸಲಾತಿಯನ್ನು 31ನೇ ಅಕ್ಟೋಬರ್ 2020ರೊಳಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಶ್ರೀ ಪಸನ್ನಾನಂದ ಸ್ವಾಮೀಜಿಯವರು ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನಾ ಧರಣಿಗೆ ನಾಯಕ ಜನಾಂಗದವರು ಬೆಂಬಲ ನೀಡುವಂತೆ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ದ್ಯಾವಪ್ಪ ನಾಯಕ ಮನವಿ ಮಾಡಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನಾಯಕ ಜನಾಂಗವು 60ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ. ಜೊತೆಗೆ ಪರಿಶಿಷ್ಟ ಪಂಗಡಕ್ಕೆ ಸುಮಾರು 56ಜಾತಿಗಳು ಸೇರ್ಪಡೆಗೊಂಡಿದ್ದು ರಾಜ್ಯದಲ್ಲಿ ಪ್ರಸ್ತುತ ಪರಿಶಿಷ್ಟ ಪಂಗಡಕ್ಕೆ ಕೇವಲ ಶೇ.3ಮೀಸಲಾತಿ ಇರುತ್ತದೆ. 1962ರಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.3 ಮೀಸಲಾತಿ ನೀಡಿದಾಗ ಪರಿಶಿಷ್ಟ ಪಂಗಡದ ಜನಸಂಖ್ಯೆ 8ಲಕ್ಷ. ಪ್ರಸ್ತುತ ಸುಮಾರು 60ಲಕ್ಷ ಪ.ಪಂಗಡದ ಜನರಿದ್ದು ಈಗಲೂ ತೊಡಕುಂಟಾಗಿದೆ. ಕೇಂದ್ರ ಸರ್ಕಾರ ರಾಜಕೀಯವಾಗಿ ಪ.ಪಂಗಡಕ್ಕೆ ಶೆ.6.75ಮೀಸಲಾತಿಯನ್ನು ನೀಡಿರುತ್ತದೆ. ಆದರೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿಲ್ಲ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭ ಹಲವಾರು ಬಿಜೆಪಿ ಸಭೆಗಳಲ್ಲಿ ಸಿಎಂ ಬಿಎಸ್ ವೈ ಹಾಗೂ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24ಗಂಟೆಯೊಳಗೆ ಶೇ.7.5ಮೀಸಲಾತಿಯನ್ನು ನೀಡುತ್ತೇವೆಂದು ಘೋಷಣೆ ಮಾಡಿರುತ್ತಾರೆ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಮೀಸಲಾತಿ ಜಾರಿಯಾಗಿರುವುದಿಲ್ಲ. ಆದ್ದರಿಂದ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ 15 ದಿನಗಳಿಂದ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಮಾಲೋಚನಾ ಸಭೆಗಳನ್ನು ನಡೆಸಿ ನಂತರ ಇಂದಿನಿಂದ ಅ.30ರವರೆಗೆ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಪ್ರಾರಂಭವಾಗಲಿದ್ದು ಸ್ವಾಮೀಜಿಯವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುವುದರ ಮುಖಾಂತರ ಶೇ.7.5 ಮೀಸಲಾತಿ ಹೋರಾಟಕ್ಕೆ ಜಯಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಜಿಲ್ಲಾಧ್ಯಕ್ಷ ಶ್ರೀಧರ್ ಚಾಮುಂಡಿಬೆಟ್ಟ, ನಗರಾಧ್ಯಕ್ಷ ರಾಜು ಮಾರ್ಕೆಟ್, ಜನಾಂಗದ ಮುಖಂಡ ಚನ್ನನಾಯಕ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಉಪಸ್ಥಿತರಿದ್ದರು.

Leave a Reply

comments

Related Articles

error: