ದೇಶಪ್ರಮುಖ ಸುದ್ದಿ

ಪ್ರತಿದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರುಪೇರಾಗುವ ಸಾಧ್ಯತೆ?

ಇನ್ನು ಮುಂದೆ ದಿನನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಏರುಪೇರಾಗುವ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ತೈಲೋದ್ಯಮ ಸಂಸ್ಥೆಯಾದ ಇಂಡಿಯನ್ ಆಯಿಲ್ ಸಂಸ್ಥೆಯಡಿ ಕಾರ್ಯ ನಿರ್ವಹಿಸುವ ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಸಂಸ್ಥೆಗಳ ಬಂಕ್’ಗಳಲ್ಲಿ ಪ್ರತಿದಿನವೂ ಬೆಲೆಗಳಲ್ಲಿ ಬದಲಾವಣೆ ತರುವ ಯೋಜನೆಯನ್ನು ಜಾರಿಗೆ ತರುವ ಚಿಂತನೆಯಲ್ಲಿದೆ.
ಈ ಮೊದಲು 15 ದಿನಕ್ಕೊಮ್ಮೆ ಬೆಲೆ ಪರಿಷ್ಕರಿಸುವ ಪದ್ಧತಿ ಭಾರತದಲ್ಲಿತ್ತು. ಮುಂದಿನ ದಿನಗಳಲ್ಲಿ ನಿತ್ಯವು ಬೆಲೆಗಳಲ್ಲಿ ಬದಲಾವಣೆ ತರುವ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿತ್ಯವು ತೈಲ ಬೆಲೆಗಳು ಬದಲಾವಣೆಯಾಗುತ್ತವೆ. ಕೆಲವೇ ದಿನಗಳಲ್ಲಿ ಅದೇ ಯೋಜನೆಯನ್ನು ಭಾರತದಲ್ಲಿ ಜಾರಿಗೊಳಿಸಲಾಗುತ್ತದೆ.
ನಿತ್ಯ ದರ ಪರಿಷ್ಕರಣೆಯಾಗುವುದರಿಂದ ಗ್ರಾಹಕರಿಗೆ ಅನುಕೂಲ ಹಾಗೂ ಅನಾನುಕೂಲ ಎರಡೂ ಆಗುವ ಸಾಧ್ಯತೆಯಿದೆ.  ಒಮ್ಮೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ತೈಲ ಬೆಲೆಗಳು ಕಡಿಮೆಯಾದರೆ ಇಲ್ಲಿಯೂ ಕಡಿಮೆಯಾಗುತ್ತದೆ. ಮರುದಿನವೇ ಏರಿಕೆಯಾದರೆ ಗ್ರಾಹಕರು ಹೆಚ್ಚು ಪಾವತಿಸಬೇಕಾಗುತ್ತದೆ. (ಕೆ.ಎಸ್.ಎಸ್-ಎಚ್)

Leave a Reply

comments

Related Articles

error: