ಮೈಸೂರು

ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರರ ಸೇರ್ಪಡೆಗೆ ವಿರೋಧ : ಕಾರ್ಮಿಕರಿಂದ ಪ್ರತಿಭಟನೆ

ಸಿಲ್ಕ್ ಫ್ಯಾಕ್ಟರಿಯಲ್ಲಿ ಮತ್ತೆ ಕೆಲವು ನೌಕರರನ್ನು ನೇಮಕ ಮಾಡಿಕೊಂಡಿರುವುದನ್ನು ವಿರೋಧಿಸಿ ಅಲ್ಲಿನ ಕಾರ್ಮಿಕರು ಶನಿವಾರ ಮುಂಜಾನೆ ಸಿಲ್ಕ್ ಫ್ಯಾಕ್ಟರಿಯ ಎದುರು ಪ್ರತಿಭಟನೆ ನಡೆಸಿದರು.

ಸಿಲ್ಕ್ ಫ್ಯಾಕ್ಟರಿಯ ಎದರು ಜಮಾಯಿಸಿದ ಕಾರ್ಮಿಕರು ನಮ್ಮಲ್ಲಿಯೇ ದುಡಿದ  ಏಷ್ಟೋ ಮಂದಿಯ ಕುಟುಂಬಿಕರು ಸಂಸಾರ ನಿರ್ವಹಣೆ ಕಷ್ಟವಾಗಿ ಇಲ್ಲಿ ನೌಕರಿಗಾಗಿ ಕಾಯುತ್ತಿದ್ದಾರೆ. ಅವರಿಗೆ ಮೊದಲು ಆದ್ಯತೆ ನೀಡುವುದನ್ನು ಬಿಟ್ಟು ಹೊಸದಾಗಿ ಬೇರೆಯವರನ್ನು ನೇಮಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರಲ್ಲದೇ, ಇಪ್ಪತ್ತೆರಡು ಮಂದಿಯನ್ನು ಹೊಸದಾಗಿ ನೇಮಕಮಾಡಿಕೊಂಡಿರುವುದನ್ನು ವಿರೋಧಿಸಿದರು.

ಸ್ಥಳಕ್ಕೆ ಜನರಲ್ ಮ್ಯಾನೇಜರ್ ಆಗಮಿಸಿದ್ದು ಅವರ ಸಮಸ್ಯೆಯನ್ನು ಆಲಿಸಿದರು. ಸೋಮವಾರದ ವರೆಗೆ ಸಮಯ ನೀಡಿ. ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕರು ಸೋಮವಾರ ಸರಿಯಾದ ನಿರ್ಧಾರಕ್ಕೆ ಬರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: