ಮೈಸೂರು

ಬೈಕ್ ಗೆ ಕಾರು ಡಿಕ್ಕಿ : ಸವಾರ ಸಾವು

ಮೈಸೂರು,ಅ.21:- ನಂಜನಗೂಡು ಊಟಿ ರಸ್ತೆಯ ಹೊಸಹಳ್ಳಿ ಗೇಟ್ ಬಳಿ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೇಟ್ ಬಳಿ ಈ ಘಟನೆ ನಡೆದಿದ್ದು, ಮೃತರನ್ನು ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದ ಮಹದೇವಶೆಟ್ಟಿ(50) ಎಂದು ಗುರುತಿಸಲಾಗಿದೆ.

ಹುಣಸನಾಳು ಗ್ರಾಮದಿಂದ ನಂಜನಗೂಡಿಗೆ ಸ್ಕೂಟರ್‌ನಲ್ಲಿ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂಜನಗೂಡಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: