ಮೈಸೂರು

ಉಡಾನ್ ಮಧ್ಯಮವರ್ಗಗಳ ಒಂದು ಸಂವಹನಕ್ಕೆ ಬಹು ಸಹಕಾರಿಯಾದ ಒಂದು ಯೋಜನೆ : ಸುಧಾಕರ ಶೆಟ್ಟಿ

ಮೈಸೂರು,ಅ.21:- ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿರುವ
“ ಕೋವಿಡ್ 19 ರ ಸನ್ನಿವೇಶದಲ್ಲಿ ವಿಮಾನಯಾನದ ಪ್ರಸ್ತುತ ಪರಿಸ್ಥಿತಿ ಮತ್ತು ಮುಂದಿನ ಸವಾಲುಗಳು” ಈ ಕಾರ್ಯಕ್ರಮದಲ್ಲಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉಡಾನ್ ಎಂಬುದು ಮಧ್ಯಮವರ್ಗಗಳ ಒಂದು ಸಂವಹನಕ್ಕೆ ಬಹು ಸಹಕಾರಿಯಾದ ಒಂದು ಯೋಜನೆ. ಇದು ದೇಶದ ಸಣ್ಣ ಸಣ್ಣ ತಾಲೂಕು ಮುಖ್ಯ ಕೇಂದ್ರಗಳ ಕಡೆಯಿಂದ, ಡಿಸ್ಟ್ರಿಕ್ಟ್ ಮುಖ್ಯ ಕೇಂದ್ರಗಳ ಕಡೆಗೆ ಮೆಟ್ರೋ ಸಿಟಿ ಗಳಿಗೆ ಪ್ರಪಂಚದಾದ್ಯಂತ ಕನೆಕ್ಟ್ ಮಾಡುವಂಥದ್ದು. ಇದು ಮೂಲಭೂತ ಸೌಕರ್ಯಗಳಿಗೆ ಸಹಕಾರಿಯಾಗಿದೆ ಎಂದರು.
ದೇಶದ ಆರ್ಥಿಕ ಸಬಲೀಕರಣಕ್ಕೆ ಅದರಲ್ಲೂ ಜಿಲ್ಲಾವಾರು ಆರ್ಥಿಕ ಸಬಲೀಕರಣಕ್ಕೆ, ಮಧ್ಯಮವರ್ಗಕ್ಕೆ ವರದಾನವಾಗಲಿದೆ. ಉಡಾನ್ ಬಹಳ ಸಹಕಾರಿಯಾಗಿದೆ. ಏಕೆಂದರೆ ನಮ್ಮ ದೇಶ ಮೂರು ತರದ ಸ್ಪರ್ಧೆಗಳ ವರ್ಗೀಕರಣ ಗೊಂಡಿದೆ. ಒಬ್ಬರು ಅಫರ್ಡೆಬಲ್ ಒಬ್ಬರು ಬಿಲೋ ಪಾವರ್ಟಿ ಮತ್ತೊಬ್ಬರು ವೆಲ್ ಸೆಟಲ್ ಪೀಪಲ್ ಅವರು ಯಾವ ತರಹ ಬೇಕಾದರೂ ಹೋಗಬಹುದು ಸಣ್ಣ ಉದ್ಯಮಗಳು ನಾನು ಜಿಲ್ಲಾ ಮಟ್ಟದಿಂದ ಪ್ರಾಜೆಕ್ಟ್ ಗಳಿಗೆ ಹೋಗಿ ಬರುವಂತೆ ಮಧ್ಯಮವರ್ಗಕ್ಕೆ ಇದು ಸಹಕಾರಿಯಾಗಿದೆ ಎಂದರು. ಸೆಂಟ್ರಲ್ ನ್ಯಾಷನಲ್ ಸಿವಿಲ್ ಏವಿಯೇಷನ್ ಪಾಲಿಸಿ ಮೋದಿಜಿಯವರ ಬಹುದೊಡ್ಡ ಕನಸು. ಒಂದು ರಾಷ್ಟ್ರ ಒಂದೇ ರೀತಿಯ ಸಮಾನ ಸಹಬಾಳ್ವೆಗೆ ಪೂರಕವಾಗಿರಬೇಕು ಎಂಬುದಕ್ಕೆ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಮೈಸೂರು ಪ್ರಪಂಚದಲ್ಲಿ ಒಂದು ವಿಶಿಷ್ಟ ಕ್ಷೇತ್ರ . ಪ್ರವಾಸಿಗರನ್ನು ಆಕರ್ಷಿಸುವ ಒಂದು ಸುಂದರ ನಗರ ಏಕೆಂದರೆ ಮೈಸೂರು ಒಂದು ಪ್ರವಾಸಿಗರ ಸ್ವರ್ಗ. ಇಲ್ಲಿ ಕೈಗಾರಿಕಾ ಬೆಳವಣಿಗೆಯೂ ಸಹ ಚೆನ್ನಾಗಿದೆ. ಸುಮಾರು 120 ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ 9 ಸಣ್ಣ ಇಂಡಸ್ಟ್ರಿಯಲ್ ಏರಿಯಾ ಇದೆ ಸುಮಾರು 15 ಸಾವಿರ ಎಕರೆ ಜಾಗ ಕೈಗಾರಿಕೆ ಗಳಿಗೋಸ್ಕರ ಮುಡುಪಾಗಿಟ್ಟಿದ್ದಾರೆ. ಮೈಸೂರಿಗೆ ಮಾತ್ರ ಅಂತರರಾಷ್ಟ್ರೀಯ ಏರ್ಪೋರ್ಟ್ ಅಲ್ಲ ಮಡಿಕೇರಿ, ಮಂಡ್ಯ, ಚಾಮರಾಜನಗರ ಈ ಭಾಗದ ಎಲ್ಲ ಮಧ್ಯಮ ವರ್ಗದಿಂದ ಉದ್ಯಮ ವಲಯದ ವಗೂ ಏರ್ಪೋರ್ಟ್ ಸಹಕಾರಿಯಾಗುತ್ತದೆ ಏರ್ಪೋರ್ಟ್ ಶ್ರೀಮಂತರಿಗೆ ಓಡಾಡುವುದಕ್ಕೆ ಮಾತ್ರವಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಮೈಸೂರಿಗೆ ಸುಮಾರು 60 ಲಕ್ಷ ಜನರು ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರತಿದಿನ ನಾವು ಕಂಡಂತೆ ಏಳರಿಂದ ಒಂಭತ್ತು ಸಾವಿರದವರೆಗೆ ವಿದೇಶಿ ಪ್ರವಾಸಿಗರು ಬಂದು ಹೋಗುತ್ತಿದ್ದರು.
ಉದಾನ್ ಉಡಾನ್ ಎಂಬುವುದು ಮಧ್ಯಮವರ್ಗಗಳ ಸಂವಹನಕ್ಕೆ ಬಹು ಸಹಕಾರಿಯಾದ ಒಂದು ಯೋಜನೆ ಇದು. ಈ ದೇಶದ ಸಣ್ಣ ಸಣ್ಣ ತಾಲೂಕು ಮುಖ್ಯ ಕೇಂದ್ರಗಳ ಕಡೆಯಿಂದ ಡಿಸ್ಟ್ರಿಕ್ಟ್ ಕೋರ್ಸ್ಗಳು ತಾಲೂಕುಗಳಿಂದ ಮೆಟ್ರೋ ಸಿಟಿ ಗಳಿಗೆ ಪ್ರಪಂಚದಾದ್ಯಂತ ಕನೆಕ್ಟ್ ಮಾಡುವಂಥದ್ದು ಇದು ಮೂಲಭೂತ ಸೌಕರ್ಯಗಳಿಗೆ ಸಹಕಾರಿಯಾಗಿದೆ ದೇಶದ ಆರ್ಥಿಕ ಸಬಲೀಕರಣಕ್ಕೆ ಅದರಲ್ಲೂ ಜಿಲ್ಲಾವಾರು ಆರ್ಥಿಕ ಸಬಲೀಕರಣಕ್ಕೆ ಉಡಾನ್ ಬಹಳ ಸಹಕಾರಿಯಾಗಿದೆ
ಮಧ್ಯಮವರ್ಗಕ್ಕೆ ವರದಾನವಾಗಲಿದೆ ಉಡಾನ್ ಏಕೆಂದರೆ ನಮ್ಮ ದೇಶ ಮೂರು ತರದ ಸ್ಪರ್ಧೆಗಳ ವರ್ಗೀಕರಣ ಗೊಂಡಿದೆ. ಸೆಂಟ್ರಲ್ ನ್ಯಾಷನಲ್ ಸಿವಿಲ್ ಸಿವಿಲ್ ಏವಿಯೇಷನ್ ಪಾಲಿಸಿ ಮೋದಿಜಿಯವರ ಬಹುದೊಡ್ಡ ಕನಸು ಒಂದು ರಾಷ್ಟ್ರ ಒಂದೇ ರೀತಿಯ ಸಮಾನ ಸಹಬಾಳ್ವೆಗೆ ಪೂರಕವಾಗಿರಬೇಕು ಎಂದು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಭಾರತ ದೇಶದ ಜನಸಂಖ್ಯೆಗೆ ಮತ್ತು ವಿಸ್ತೀರ್ಣಕ್ಕೆ ಹೋಲಿಸಿದರೆ ಭಾರತದಲ್ಲಿರುವ ಏರ್ಪೋರ್ಟ್ ಗಳು ಕಡಿಮೆಯಿರಬಹುದು ಭಾರತದಲ್ಲಿ 486 ಏರ್ಪೋರ್ಟ್ ಕಡಿಮೆ ಎಂದು ಹೇಳಬಹುದು. ಭಾರತದಲ್ಲಿ ಏರ್ಸ್ಕ್ರೀನ್ 486,ಹಾಗೂ 123 ಏರ್ಪೋರ್ಟ್ ಗಳಿವೆ ಅದರಲ್ಲಿ 34ಆರ್ಮಿ ಯವರು ಉಪಯೋಗಿಸುತ್ತಿದ್ದಾರೆ ಅದರಲ್ಲಿ 2 ಇಂಟರ್ನ್ಯಾಷನಲ್ ಏರ್ಪೋರ್ಟ್ ಇದೆ. ಅದರಲ್ಲಿ ಬೆಂಗಳೂರು ಮತ್ತು ಮಂಗಳೂರಿನ 2 ಚೆನ್ನಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ 2 ಇಂಟರ್ನ್ಯಾಷನಲ್ ಏರ್ಪೋರ್ಟ್ ಬಳ್ಳಾರಿಯ ಜಿಂದಾಲ್ ರವರದು ಸೇರಿದ್ರೆ 6 ಡೊಮೆಸ್ಟಿಕ್ ಏರ್ಪೋರ್ಟ್ , ಬೆಳಗಾವಿ, ಬಳ್ಳಾರಿ ಹುಬ್ಬಳ್ಳಿ ಮೈಸೂರು ಗಳಲ್ಲಿದೆ . ಮೈಸೂರು ಏರ್ಪೋರ್ಟ್ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಡಾಕ್ಟರ್ ಮಂಜುನಾಥ್ ರವರು ಬಂದಮೇಲೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಮತ್ತು ಮೈಸೂರಿನ ಎಲ್ಲಾ ವರ್ಗಗಳು ಅಂದರೆ ಟ್ರಾವೆಲ್, ಬಿಸಿನೆಸ್ ಕಮಿನಿಟಿ ಇರಬಹುದು ಇರಬಹುದು ,ಇಂಡಸ್ಟ್ರಿ ಇರಬಹುದು ಅಥವಾ ಅಧಿಕಾರಿವರ್ಗ ಇರಬಹುದು ಹಾಗೂ ಈಗಿರುವ ಪ್ರಸ್ತುತ ರಾಜಕೀಯ ನಾಯಕರ ಜೊತೆ ಒಳ್ಳೆಯ ಸಹ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರಾದ ಅರ್. ಮಂಜುನಾಥ್ ಮಾತನಾಡಿ ಮೈಸೂರು ವಿಮಾನ ನಿಲ್ದಾಣದ ಮುಂದಿನ ಪ್ರಗತಿಯ ಹಾದಿಯನ್ನು ಸವಿಸ್ತಾರವಾಗಿ ಮುಂದಿಟ್ಟರು. ವಿಮಾನಯಾನದ ಮುಂದಿನ ಡಿಜಿಟಲಿಕರಣದ ಬಗ್ಗೆ ಹೇಳಿದರು. ಮೈಸೂರು ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿಯ ಪಥವನ್ನು ವಿವರಿಸಿದರು. ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಉಪಾಧ್ಯಕ್ಷರಾದ ಎನ್ ಹೆಚ್. ಜಯಂತ್ , ಕಾರ್ಯದರ್ಶಿಗಳಾದ ಶ್ರೀ ಶೈಲ್ ರಾಮಣ್ಣನವರು, ಖಜಾಂಚಿಗಳಾದ ಎಂ. ಸಿ. ಬನ್ಸಾಲಿ ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: