ಮೈಸೂರು

ವೀರಯೋಧರ ಸಮಾಧಿಯ ಪುಣ್ಯಮಣ್ಣನ್ನು ಸಂಗ್ರಹಿಸಿ ಮೈಸೂರು ತಲುಪಿದ ಉಮೇಶ್ ಗೋಪಿನಾಥ್ ಜಾದವ್ ಗೆ ಟೀಂ ಮೈಸೂರು ತಂಡ ಸ್ವಾಗತ

ಮೈಸೂರು,ಅ.22:- “ಜನ್ಮಭೂಮಿ ಕರ್ಮ ಭೂಮಿ” ಎಂಬ ಧ್ಯೇಯೋದ್ದೇಶದಿಂದ ಪುಲ್ವಾಮಾ ಅಟ್ಯಾಕ್ ನಲ್ಲಿ ಹುತಾತ್ಮರಾದ 40 ಯೋಧರು ಹಾಗೂ ಇನ್ನಿತರ ಸಂದರ್ಭದಲ್ಲಿ ಹುತಾತ್ಮ ರಾದ ಒಟ್ಟು 76 ವೀರಯೋಧರ ಮನೆಗಳಿಗೆ ಭೇಟಿ ನೀಡಿ ಅವರ ಸಮಾಧಿಯ ಪುಣ್ಯ ಮಣ್ಣನ್ನು ಸಂಗ್ರಹಿಸಿ ದೇಶಾದ್ಯಂತ 67000 ಕಿಲೋಮೀಟರುಗಳ ಪಯಣ ಮಾಡಿ ಮೈಸೂರಿಗೆ ಉಮೇಶ್ ಗೋಪಿನಾಥ್ ಜಾದವ್ ಆಗಮಿಸಿದ್ದರು.
ಇವರ ಈ ಪ್ರಯಾಣದ ಉದ್ದೇಶ ದೇಶಭಕ್ತಿ ಮತ್ತು ಯೋಧರ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ಪ್ರಯಾಣವು ಕಳೆದ ಏಪ್ರಿಲ್ 2019 ರಂದು ಪ್ರಾರಂಭಗೊಂಡಿದ್ದು, ಏಪ್ರಿಲ್ 2021 ರಂದು ಒಟ್ಟು 1 ಲಕ್ಷದ 20 ಸಾವಿರ ಕಿಲೋಮೀಟರ್ ಸಾಗಿದ್ದಾರೆ.
ಕೊರೋನ ಸಂಬಂಧ ಸ್ಥಗಿತಗೊಳಿಸಿದ್ದರು
ಮತ್ತೆ ಅಕ್ಟೋಬರ್ 21 ರಿಂದ ಪ್ರಾರಂಭಿಸಿ ಮೈಸೂರಿಗೆ ಆಗಮಿಸಿದರು. ಇಂದು ಅವರನ್ನು ಟೀಮ್ ಮೈಸೂರು ತಂಡದ ಸದಸ್ಯರು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಸ್ವಾಗತಿಸಿ ಅಲ್ಲಿಂದ ರ್ಯಾಲಿ ಮುಖಾಂತರ ಬಂದು ಅಶೋಕ ರಸ್ತೆ, ಮುಂದೆ ಬಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ದೊಡ್ಡಕೆರೆ ಮೈದಾನದಲ್ಲಿ ಅವರನ್ನು ಸನ್ಮಾನಿಸಿದರು. ಬಳಿಕ ಅವರು ಅವರ ಅನುಭವ ಹಂಚಿಕೊಂಡರು.
ಟೀಂ ಮೈಸೂರು ತಂಡದಿಂದ ಅವರ ಮುಂದಿನ ಪ್ರಯಾಣಕ್ಕೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಟೀಮ್ ಮೈಸೂರ್ ತಂಡದ ಗೋಕುಲ್ ಗೋವರ್ಧನ್ ,ಯಶವಂತ್, ಕಿರಣ್ ಜಯರಾಮ್ ಗೌಡ ,ಅನಿಲ್ ಜೈನ್, ಕೆಂಡಗಣ್ಣಸ್ವಾಮಿ, ಆನಂದ್ ,ಲಿಂಗರಾಜು ,ಹರೀಶ್ ,ಸತೀಶ್ ಬಾಲಕೃಷ್ಣ,ದೇವರಾಜ್, ಗೋವಿತ್,ರಘು, ರವಿ, ಮಧು, ಮಂಜು ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: