ಕ್ರೀಡೆಪ್ರಮುಖ ಸುದ್ದಿ

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕೋವಿಡ್ ನಿಂದ ರದ್ದು

ದೇಶ( ನವದೆಹಲಿ)ಅ.23:-ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕೋವಿಡ್-19 ಭೀತಿಯಿಂದಾಗಿ ರದ್ದುಗೊಂಡಿದೆ. ಜಾಗತಿಕ ಸಾಂಕ್ರಾಮಿಕ ಕೊರೋನಾ ವೈರಸ್ ಹರಡಿದ ಕಾರಣ ವೈಯುಕ್ತಿಕ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ / ಮುಂದೂಡಲಾಗಿದೆ.

ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಈ ಮಾಹಿತಿಯನ್ನು ನೀಡಿದ್ದು, ಚಾಂಪಿಯನ್‌ಶಿಪ್ ಅನ್ನು ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಆದರೆ ಚಾಂಪಿಯನ್‌ಷಿಪ್‌ನ ಮುಂದಿನ ಋತುವನ್ನು ಈಗಾಗಲೇ 2021ರಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕೊರೋನಾದ ಆತಂಕದ ಹಿನ್ನಲೆಯಲ್ಲಿ ಚಾಂಪಿಯನ್‌ಶಿಪ್ ದಿನಾಂಕವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ, ಬದಲಿಗೆ ರದ್ದು ಮಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: