ಕರ್ನಾಟಕ

ಹಂಪಿ ಮಂದಿರದ ಬಳಿ ಮೇಕೆಯ ಬಲಿ ; ಕೋಮುಸೌಹಾರ್ದ ಕದಡುವ ಹುನ್ನಾರ ಶಂಕೆ

ಬಳ್ಳಾರಿ: ಹಂಪಿಯ ಪಂಪ ಭೂಪ ರಸ್ತೆಯಲ್ಲಿ ಯಂತ್ರೋದ್ಧಾರಕ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ದುಷ್ಕರ್ಮಿಗಳು ಮೇಕೆಯ ‌ಮರಿ ತುಂಡು ಮಾಡಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರತಿ ಶನಿವಾರ ಯಂತ್ರೋದ್ಧಾರಕನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ ಕದಡುವ ಹುನ್ನಾರ ಇದಾಗಿರಬಹುದು ಎಂದು ಶಂಕಿಸಲಾಗಿದೆ.

ಉದ್ದೇಶ ಪೂರ್ವಕವಾಗಿ ಮೇಕೆಯ ಮರಿ ಬಲಿ ನೀಡಲಾಗಿದ್ದು, ಅನತಿದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವುದು ಆಶ್ಚರ್ಯ ಎಂದಿರುವ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ಡಾ.ವಿಶ್ವನಾಥ್ ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಮನವಿ ಮಾಡಿದ್ದಾರೆ.

(ಎಸ್.ಎನ್‍/ಎನ್‍.ಬಿ.ಎನ್‍)

Leave a Reply

comments

Related Articles

error: