ಕರ್ನಾಟಕ

ಮಾಜಿ ಸಿಎಂ ಎಚ್ಡಿಕೆಗೆ ಕುರಿಮರಿ, ಬೆಳೆದ ಬೆಳೆಯನ್ನು ನೀಡಿ ಋಣ ತೀರಿಸಿದ ರೈತರು

ತುಮಕೂರು,ಅ.23-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರು ಕುರಿಮರಿ ನೀಡಿ, ತಾವು ಬೆಳೆದ ಬೆಳೆಯಲ್ಲಿ ಸ್ವಲ್ಪ ಬೆಳೆಯನ್ನು ಕೊಟ್ಟು ಋಣಭಾರ ತೀರಿಸಿದ್ದಾರೆ.

ಶಿರಾ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ಮತಯಾಚಿಸಲು ಎಚ್​ಡಿಕೆ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಕೈಗೊಂಡಿದ್ದಾರೆ. ಅದರಂತೆ ನಿನ್ನೆ ಬರಗೂರಿನಿಂದ ಶಿರಾ ಕಡೆಗೆ ಹೋಗುತ್ತಿದ್ದ ಕುಮಾರಸ್ವಾಮಿ ಅವರನ್ನು ಮಾರ್ಗಮಧ್ಯೆ ಸೀಗಲಹಳ್ಳಿಯಲ್ಲಿ ಜನರು ವಿಶೇಷವಾಗಿ ಸನ್ಮಾನಿಸಿದರು.

ರೈತರ ಸಾಲಮನ್ನಾ ಮಾಡಿದ ಕೃತಜ್ಞತಾ ಪೂರ್ವಕವಾಗಿ ರೈತರು ಹೊಲದಲ್ಲಿ ಬೆಳೆದಿದ್ದ ಪದಾರ್ಥಗಳು ಹಾಗೂ ಕುರಿಮರಿಯನ್ನು ಎಚ್​ಡಿಕೆಗೆ ನೀಡಿ ಋಣಭಾರ ತೀರಿಸಿದರು.

ರೈತರ ಸನ್ಮಾನ ಸ್ವೀಕರಿಸಿ ಭಾವುಕರಾದ ಕುಮಾರಸ್ವಾಮಿ, ರೈತರಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡುವ ಕನಸಿದ್ದು ಜೆಡಿಎಸ್​ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ದಿನ ನನ್ನ ಕನಸು ನನಸಾಗಲಿದೆ ಎಂದರು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: