ದೇಶಪ್ರಮುಖ ಸುದ್ದಿ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೆ ಅನಾರೋಗ್ಯ, ಮನೆಯಲ್ಲಿ ವಿಶ್ರಾಂತಿ

ಮುಂಬೈ,ಅ.23- ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅನಾರೋಗ್ಯಕ್ಕೀಡಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಗ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಅಜಿತ್ ಪವಾರ್ ಅವರು ಇತ್ತೀಚೆಗೆ ಪುಣೆ ಹಾಗೂ ಸೋಲಾಪುರ ಜಿಲ್ಲೆಗಳಲ್ಲಿನ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆಗ ಆಯಾಸವಾದ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಿದ್ದರು. ಅವರ ಸೂಚನೆ ಮೇರೆಗೆ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೆ ಅವರಿಗೆ ಏನಾಗಿದೆ, ಏನು ಸಮಸ್ಯೆ ಎಂಬ ಬಗ್ಗೆ ಆಸ್ಪತ್ರೆ ಮೂಲಗಳು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಪವಾರ್ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್ ನೆಗೆಟಿವ್ ಬಂದಿರುವುದಾಗಿ ಎನ್​ಸಿಪಿ ವಕ್ತಾರ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ.

ಸಾಮಾನ್ಯ ನಿತ್ರಾಣ ಬಿಟ್ಟರೆ ಬೇರೆ ಏನೂ ಅನಾರೋಗ್ಯ ಇಲ್ಲ ಎಂದಿದ್ದಾರೆ. ಆಯಾಸದ ಕಾರಣ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದಾರೆ. ಅದು ಬಿಟ್ಟರೆ ಅವರು ಕ್ರಿಯಾಶೀಲವಾಗಿಯೇ ಇದ್ದಾರೆ. ಗುರುವಾರವೂ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದಾರೆ ಎಂದು ಪವಾರ್ ಅವರ ಸೋದರಿ, ಸಂಸದೆ ಸುಪ್ರಿಯಾ ಸುಲೆ ಹೇಳಿದ್ದಾರೆ. (ಏಜೆನ್ಸೀಸ್​, ಎಂ.ಎನ್)

Leave a Reply

comments

Related Articles

error: