ಕರ್ನಾಟಕಪ್ರಮುಖ ಸುದ್ದಿಮನರಂಜನೆ

ವಿಚ್ಛೇದನ ಅರ್ಜಿ ವಾಪಸ್ ಪಡೆದ ಚಿತ್ರ ಸಾಹಿತಿ ಕೆ.ಕಲ್ಯಾಣ್ ಪತ್ನಿ

ಬೆಂಗಳೂರು,ಅ.23-ಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರ ಪತ್ನಿ ಅಶ್ವಿನಿ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಸಾಹಿತಿ ಕಲ್ಯಾಣ್ ಕುಟುಂಬದಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿದೆ.

ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂದಕ್ಕೆ ಪಡಿದ್ದಾರೆ. ಅಕ್ಟೋಬರ್ 17 ರಂದು ಕಲ್ಯಾಣ್ ದಂಪತಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಅಶ್ವಿನಿ ಅವರು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ವಿಚ್ಛೇದನ ಅರ್ಜಿ ವಾಪಸ್ ಪಡೆದು ಮತ್ತೆ ಕಲ್ಯಾಣ್ ಜೊತೆ ಜೀವನ ನಡೆಸುವುದಾಗಿ ಅಶ್ವಿನಿ ಹೇಳಿದ್ದರು. ಮಾತಿನಂತೆ ಅರ್ಜಿ ವಾಪಸ್ ಪಡೆದು ಮತ್ತೆ ಪತಿಯ ಜೊತೆ ಸಂತೋಷದ ಜೀವನ ಪ್ರಾರಂಭಿಸಿದ್ದಾರೆ. ಅಕ್ಟೋಬರ್ 3ರಂದು ಕೆ ಕಲ್ಯಾಣ್ ಪತ್ನಿ ತಮ್ಮ ಪತಿಯ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಂತರ ವಿಚ್ಛೇದನ ನೀಡುವ ಸಲುವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮನೆ ಕೆಲಸದಾಕೆ ಗಂಗಾ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಪೊಲೀಸ್ ಆ ಬಗ್ಗೆ ತನಿಖೆ ಕೈಗೊಂಡಾಗ ಸತ್ಯ ಬಯಲಿಗೆ ಬಂದಿದೆ. ಮನೆ ಕೆಲಸದಾಕೆ ಗಂಗಾ ಮತ್ತು ಶಿವಾನಂದ ವಾಲಿ ಎಂಬ ಮಂತ್ರವಾದಿ ಕಲ್ಯಾಣ್ ಪತ್ನಿ ಅಶ್ವಿಯವರನ್ನು ವಂಚಿಸಿ, ವಶೀಕರಣ ಮಾಡಿದ್ದರು. ಅಲ್ಲದೆ ಆ ಮಂತ್ರವಾದಿ ಅಶ್ವಿನಿ ತಂದೆ-ತಾಯಿಗೆ ಸೇರಿದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದರಂತೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ವಾಲಿಯನ್ನು ಬಂಧಿಸಲಾಗಿತ್ತು. ನಿನ್ನೆ ಶಿವಾನಂದ ವಾಲಿ ಜಾಮೀನು ಪಡೆದು ಹೊರಬಂದಿದ್ದಾರೆ. 50 ಸಾವಿರ ರೂಪಾಯಿ ಶ್ಯುರಿಟಿಯ ಮೇಲೆ ಷರತ್ತು ಬದ್ಧ ಜಾಮೀನು ನೀಡಿದೆ. ಇನ್ನೂ ಮತ್ತೋರ್ವ ಆರೋಪಿ ಮನೆ ಕೆಲಸದಾಕೆ ಗಂಗಾ ತಲೆಮರೆಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: