ಪ್ರಮುಖ ಸುದ್ದಿ

ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳು : ಬಿಜೆಪಿ ಅಭ್ಯರ್ಥಿ ಮುನಿರತ್ನ ಲೇವಡಿ

ರಾಜ್ಯ(ಬೆಂಗಳೂರು)ಅ.23:- ರಾಜರಾಜೇಶ್ವರಿನಗರ ಉಪ ಚುನಾವಣಾ ಕಣ ರಂಗೇರಿದ್ದು ಆಡಳಿತ ಪಕ್ಷದ ನಾಯಕರು ಮತ್ತು ವಿಪಕ್ಷದ ನಾಯಕರ ನಡುವೆ ಆರೋಪ, ಪ್ರತ್ಯಾರೋಪ, ವಾದ, ವಾಗ್ವಾದ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರನ್ನು ನಿರುದ್ಯೋಗಿಗಳು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿರುವ ಮುನಿರತ್ನ, ಕಾಂಗ್ರೆಸ್ ನಲ್ಲಿ ಈಗ 65 ಶಾಸಕರಿದ್ದಾರೆ. ಕಾಂಗ್ರೆಸ್ ಶಾಸಕರೆಲ್ಲಾ ನಿರುದ್ಯೋಗಿಗಳು, ಅವರಿಗೆಲ್ಲಾ ಉದ್ಯೋಗವೇ ಇಲ್ಲ. ಅವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಅವರದ್ದೇ ಒಂದು ಸಂಘ ಕಟ್ಟಿಕೊಂಡು ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಏಳೇಳು ಜನ್ಮದಲ್ಲೂ ಡಿಕೆಶಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ- ವ್ಯಂಗ್ಯ
ಯುದ್ಧದಲ್ಲಿ ಎದುರಾಳಿ ಸರಿಸಮ ಇದ್ರೆ ಹೊರಾಡಬಹುದೆಂದು ಹೇಳಿಕೆ ನೀಡುವ ಮೂಲಕ ತಮ್ಮನ್ನು ಟೀಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಮುನಿರತ್ನ, ಡಿ.ಕೆ ಶಿವಕುಮಾರ್ ಸರಿಸಮನಾಗಲು ನನಗೆ ಸಾಧ್ಯವಿಲ್ಲ. ಏಳೇಳು ಜನ್ಮದಲ್ಲೂ ಡಿ.ಕೆ.ಶಿವಕುಮಾರ್ ಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. ಡಿ ಕೆ ಶಿವಕುಮಾರ್ ದೊಡ್ಡವರು. ಅವರ ಮುಂದೆ ನಾನು ಸಣ್ಣವನು ಎಂದು ವ್ಯಂಗ್ಯವಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: