ಕರ್ನಾಟಕಪ್ರಮುಖ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಗೃಹಿಣಿ ಮೇಲೆ ಮಾಣಾಂತಿಕ ಹಲ್ಲೆ

ತುಮಕೂರು: ಬಟ್ಟೆ ಒಣಗಿಸುವ ವಿಚಾರದಲ್ಲಿ ಗೃಹಿಣಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಿಪಟೂರು ತಾಲೂಕಿನ ಸೂಗೂರು ಗ್ರಾಮದಲ್ಲಿ ನಡೆದಿದೆ. ಸಿ.ವಿ. ಭಾಗ್ಯ (42) ಗಾಯಗೊಂಡ ಮಹಿಳೆ.

ಸೂಗೂರು ಗ್ರಾಮದ ತಮ್ಮ ಮನೆಯಲ್ಲಿ ಬಟ್ಟೆ ತೊಳೆದು ತೋಟದಲ್ಲಿ ಒಣಗಿಸಲು ಹಾಕಿದ್ರು. ಶಿವಶಂಕರ್ ಎನ್ನುವವರು ಇದು ತಮ್ಮ ತೋಟ. ಬಟ್ಟೆ ಯಾಕೆ ಒಣಗಿಸಲು ಹಾಕಿದ್ರಿ ಎಂದು ಕ್ಯಾತೆ ತೆಗೆದಿದ್ದಾನೆ. ಅಸಲಿಗೆ ಶಿವಶಂಕರ್ ಹಾಗೂ ಭಾಗ್ಯ ದಾಯಾದಿಗಳು. ಈ ತೋಟ ಇಬ್ಬರಿಗೂ ಸೇರಿದ್ದಾಗಿದೆ. ‌

ಆದ್ರೂ ಕ್ಯಾತೆ ತೆಗೆದು ಜಗಳ ಮಾಡಿದ್ದಾರೆ. ಶಿವಶಂಕರ್ ಹಾಗೂ ಮಗ ಶಿವರಾಜ್ ಭಾಗ್ಯಾ ಅವರ ಮೇಲೆ ಗುದ್ದಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಪರಿಸ್ಥಿತಿ ಗಂಭೀರವಾಗಿದೆ.

ಭಾಗ್ಯ ಅವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

(ಎಸ್.ಎನ್/ಎನ್‍.ಬಿ.ಎನ್)

Leave a Reply

comments

Related Articles

error: