ಪ್ರಮುಖ ಸುದ್ದಿಮೈಸೂರು

ಹಳಿಗಳ ಮೇಲೆ ಬರಲು ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಸಜ್ಜು

ಬೆಂಗಳೂರು/ಮೈಸೂರು,ಅ.23:- ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಹೊಸ ಅವತಾರದಲ್ಲಿ ಹಳಿಗಳ ಮೇಲೆ ಬರಲು ಸಜ್ಜಾಗಿದೆ. 2018 ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಿ 10 ವರ್ಷಗಳನ್ನು ಪೂರೈಸಿದ ನಂತರ, ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲನ್ನು 2020 ರ ಜನವರಿಯಲ್ಲಿ ಐ ರ್ ಸಿ ಟಿ ಸಿ ಗೆ ಹಸ್ತಾಂತರಿಸಲಾಯಿತು. ರೈಲಿನ ಮಾಲೀಕತ್ವವು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ದ್ದೆ ಆಗಿದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಐ ರ್ ಸಿ ಟಿ ಸಿ ಈ ಐಷಾರಾಮಿ ರೈಲಿನ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆ ನಿರ್ವಹಿಸಲಿದೆ ಎಂದು ಐ ರ್ ಸಿ ಟಿ ಸಿ ಪ್ರಾದೇಶಿಕ ವ್ಯವಸ್ಥಾಪಕ ಬಿ ರಮೇಶ್ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಪ್ರವಾಸಿಗರಿಗೆ ಸುಖಕರವಾಗಿ ಪ್ರಯಾಣಿಸಲು ರೈಲು ಈಗ ಹೊಸ ವೈಶಿಷ್ಟ್ಯಗಳ ಐಷಾರಾಮಿ ಪೀಠೋಪಕರಣಗಳು, ಸೊಗಸಾದ ಪರದೆಗಳು. ನವೀಕರಣವಾದ ರೂಮುಗಳು ಹಾಗು ಶೌಚಾಲಯ. ಹೆಸರಾಂತ ಅಂತರರಾಷ್ಟ್ರೀಯ ಬ್ರ್ಯಾಂಡ್ಗಳ ಹಾಸಿಗೆಗಳು. ಪ್ರಯಾಣದಲ್ಲಿ ಮನರಂಜನೆಯನ್ನು ಒದಗಿಸಲು ಎಲ್ ಇ ಡಿ ಟಿವಿ ಜೊತೆಗೆ ನೆಟ್ಫ್ಲಿಕ್ಸ್, ಅಮೆಜಾನ್, ಹಾಟ್ ಸ್ಟಾರ್ ಸಂಪರ್ಕಗಳ್ಳನ್ನು ಒದಗಿಸಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಅಗ್ನಿ ಶಾಮಕ ಸುರಕ್ಷತೆಯನ್ನು ಒದಗಿಸಿದೆ. ಅನುಭವಿ ಬಾಣಸಿಗರು ಸೂಚಿಸಿರುವ ಅಂತರರಾಷ್ಟ್ರೀಯ ಮತ್ತು ದೇಶೀಯ ಖಾದ್ಯಗಳ ಮೆನು, ಜೊತೆಗೆ ಮನೆ ಮದ್ಯ ಮತ್ತು ಬಿಯರ್ ಗಳು. ಪ್ಯಾಕೇಜ್ ನಲ್ಲಿ ಸೇರಿದೆ. ಅತಿಥಿಗಳು ಪ್ರಯಾಣದಲ್ಲಿ ಆರಾಮದಾಯಕವಾಗಿರಲು , ರೈಲಿನಲ್ಲಿ ಸ್ಪಾ ಸೌಕರ್ಯ ಇದೆ ಜೊತೆಗೆ ವ್ಯಾಯಾಮಕ್ಕಾಗಿ ವಿಶೇಷ ಜಿಮ್ ಯಂತ್ರಗಳನ್ನು ಸಹ ಇರಿಸಿದೆ.
ಐ ರ್ ಸಿ ಟಿ ಸಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಪ್ರವಾಸಿ ಸ್ಥಳಗಳನ್ನು ಒಳಗೊಂಡ 3 ಪ್ರವಾಸಗಳನ್ನು ಆಯೋಜಿಸಲು ಯೋಚಿಸಿದೆ.
ಐ ರ್ ಸಿ ಟಿ ಸಿ , ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳನ್ನು ಒಳಗೊಂಡಂತೆ ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ಮರಳುವ ಮೂರು ಪ್ರವಾಸಗಳನ್ನು ಆಯೋಜಿಸಿದೆ.
ಹೆಮ್ಮೆಯ ಕರ್ನಾಟಕ
6 ರಾತ್ರಿ / 7 ಹಗಲು ಈ ಪ್ರವಾಸವು ಬಂಡೀಪುರ ರಾಷ್ಟ್ರೀಯ ಉದ್ಯಾನ, ಮೈಸೂರು, ಹಳೆಬಿಡು, ಚಿಕ್ಕಮಗಳೂರು, ಐಹೊಳೆ, ಪಟ್ಟಡಕಲ್, ಹಂಪಿ ಮತ್ತು ಗೋವಾಗಳಿಗೆ ಆಯೋಜಿಸಿದೆ.
ದಕ್ಷಿಣ ಆಭರಣ
6 ರಾತ್ರಿ / 7 ಹಗಲು ಈ ಪ್ರವಾಸವು ಮೈಸೂರು, ಹಂಪಿ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡ್, ಕುಮಾರಕೋಮ್ ಮತ್ತು ಕೊಚ್ಚಿನ್ ಗೆ ಆಯೋಜಿಸಿದೆ.
ಕರ್ನಾಟಕದ ಒಂದು ಮಿನುಗು ನೋಟ
ಬಂಡಿಪುರ, ಮೈಸೂರು ಮತ್ತು ಹಂಪಿಯನ್ನು ಒಳಗೊಂಡ 3 ರಾತ್ರಿಗಳು / 4 ದಿನಗಳ ಪ್ರವಾಸ.
ಇ ಐಷಾರಾಮಿ ರೈಲು ಪ್ರವಾಸದ ವೆಚ್ಚವು ರೈಲಿನಲ್ಲಿ ಎಲ್ಲಾ ಊಟ ಮತ್ತು ಮನೆ ವೈನ್/ಮದ್ಯ, ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಲು ಹವಾನಿಯಂತ್ರಿತ ಬಸ್ಸುಗಳು, ಪ್ರವಾಸಿ ಮಾರ್ಗದರ್ಶಿ, ಸ್ಮಾರಕಗಳ ಪ್ರವೇಶ ಶುಲ್ಕ ಪ್ರವಾಸಗಳ ವಿವರದಂತೆ ಇರಲಿದೆ.
ಭಾರತ ಸರ್ಕಾರದ ಆಶಯದಂತೆ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಐ ರ್ ಸಿ ಟಿ ಸಿ ಸಂಸ್ಥೆಯು, ಪ್ರವಾಸಿಗರಿಗೆ ವಿಶೇಷ ವೆಚ್ಚದಲ್ಲಿ ಐಷಾರಾಮಿ ರೈಲು ಪ್ರವಾಸವನ್ನು ಅನುಭವಿಸುವ ಸುವರ್ಣ ಅವಕಾಶವನ್ನು ನೀಡಿದೆ ಈ ಪ್ರವಾಸಗಳು ಜನವರಿ 2021 ರಿಂದ ಆರಂಭಗೊಳ್ಳಲಿದೆ. ಪ್ರವಾಸಿಗರು 6 ರಾತ್ರಿ ಮತ್ತು 7 ದಿನಗಳ ಪ್ರವಾಸದಲ್ಲಿ , 2 ರಾತ್ರಿ ಮತ್ತು 3 ದಿನಗಳ ಪ್ರವಾಸದ ಪ್ರಯಾಣವನ್ನು ಒಬ್ಬ ವ್ಯಕ್ತಿಗೆ ಕೇವಲ 59,999 ರೂ. ತೆರಿಗೆ ಹೊರತುಪಡಿಸಿ, ಇದಲ್ಲದೆ ದೇಶೀಯ ಪ್ರವಾಸಿಗರಿಗಾಗಿ ಪೂರ್ಣ ಪ್ರವಾಸಕ್ಕೆ ಒಬ್ಬರಿಗೆ ಪೂರ್ಣವೆಚ್ಚ ನೀಡಿದರೆ, ಸಹವರ್ತಿ ಪ್ರಯಾಣಿಕರಿಗೆ ಕೇವಲ 50 % ಒಟ್ಟು ವೆಚ್ಚ ಮಾತ್ರ .
ಐ ರ್ ಸಿ ಟಿ ಸಿ ವೆಬ್ ತಾಣದಲ್ಲಿ ಟಿಕೆಟ್ ಕಾಯ್ದಿರಿಸುವ ಭಾರತೀಯ ಪ್ರವಾಸಿಗರಿಗೆ ಭರ್ಜರಿ 35% ರಷ್ಟು ರಿಯಾಯತಿ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳು, ಕೊಡುಗೆಗಳು ಮತ್ತು ಬುಕಿಂಗ್ ಗಳಿಗಾಗಿ www.goldenchariot.org ಭೇಟಿನೀಡಬಹುದು. ಹೆಚ್ಚಿನ ಮಾಹಿತಿಗೆ 8287931971,8595931291 ಸಂಪರ್ಕಿಸಬಹುದು ಎಂದಿದ್ದಾರೆ.

Leave a Reply

comments

Related Articles

error: