ದೇಶ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಪಿಲ್ ಶರ್ಮಾ ಫೋಟೋ ಟ್ವೀಟ್ ಮಾಡಿದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ  

ನವದೆಹಲಿ,ಅ.24-ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ನಿನ್ನೆ ಹೃದಯಾಘಾತಕ್ಕೊಳಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಕಪಿಲ್ ಅವರ ಫೋಟೋವನ್ನು ಮಾಜಿ ಆಟಗಾರ ಚೇತನ್‌ ಶರ್ಮಾ ಟ್ವೀಟ್ ಮಾಡಿದ್ದು, ಅದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಮಾಧಾನ ಮೂಡಿಸಿದೆ.

ನಗು ಮೊಗದಲ್ಲಿರುವ ಕಪಿಲ್ ದೇವ್ ಅವರ ಫೋಟೋವನ್ನು ಚೇತನ್‌ ಶರ್ಮಾ ಟ್ವೀಟ್ ಮಾಡಿದ್ದಾರೆ. ಕಪಿಲ್ ಪಾಜಿ ಈಗ ಸರಿಯಾಗಿದ್ದಾರೆ ಮತ್ತು ಅವರ ಮಗಳು ಅಮ್ಯಾ ಅವರೊಂದಿಗೆ ಕುಳಿತಿದ್ದಾರೆ. ಜೈ ಮಾತಾ ಜೀ ಎಂದು ಬರೆದುಕೊಂಡಿದ್ದರು.

ಕಪಿಲ್ ದೇವ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ಬಳಿಕ ಅವರು ಆರೋಗ್ಯವಾಗಿದ್ದು ಐಸಿಯುನಲ್ಲಿದ್ದಾರೆ. ಅವರು ಕೆಲವೇ ದಿನಗಳಲ್ಲಿ ಮನೆಗೆ ಮರಳುತ್ತಾರೆ ಎಂದು ನಿನ್ನೆ ಸಂಜೆ ಆಸ್ಪತ್ರೆ ಮ್ಯಾನೇಜ್‌ಮೆಂಟ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.

ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟ್‌ ದಿಗ್ಗಜರು ಕಪಿಲ್ ದೇವ್ ಅವರ ಯೋಗಕ್ಷೇಮಕ್ಕಾಗಿ ದೇವರನ್ನು ಪ್ರಾರ್ಥಿಸಿ ಟ್ವೀಟ್‌ ಮಾಡಿದ್ದರು. ಕಪಿಲ್ ದೇವ್, ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ, ನೀವು ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿನ್ ಟ್ವೀಟ್ ಮಾಡಿದ್ದರು. ಅದೇ ರೀತಿ ವಿರಾಟ್ ಕೊಹ್ಲಿ, ಕಪಿಲ್ ದೇವ್, ನೀವು ಬೇಗನೆ ಗುಣಮುಖರಾಗಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಅಜಿಂಕ್ಯ ರಹಾನೆ, ಅನಿಲ್ ಕುಂಬ್ಳೆ, ಬ್ರೆಟ್‌ ಲೀ ಮತ್ತು ಮಾಯಾಂಕ್ ಅಗರ್ವಾಲ್ ಕೂಡ ಕಪಿಲ್ ದೇವ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದರು.

ಕಪಿಲ್‌ ದೇವ್‌ ನಿನ್ನೆ ಚಿಕಿತ್ಸೆ ಬಳಿಕ ತಡವಾಗಿ, ಪ್ರೀತಿ ಮತ್ತು ಕಾಳಜಿಗೆ ಎಲ್ಲರಿಗೂ ಧನ್ಯವಾದಗಳು, ನಾನು ಶುಭ ಹಾರೈಕೆಗಳಿಂದ ಮುಳುಗಿದ್ದೇನೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

1983 ರಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ಕಪಿಲ್ ದೇವ್ ತಂಡದ ನಾಯಕರಾಗಿದ್ದರು. ಅವರು ಒಟ್ಟು 131 ಟೆಸ್ಟ್, 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 16 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಹೊಂದಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: