ಪ್ರಮುಖ ಸುದ್ದಿಮೈಸೂರು

ಆಯುಧ ಪೂಜೆ ,ವಿಜಯದಶಮಿ ಶುಭಾಶಯಗಳನ್ನು ತಿಳಿಸಿದ ಉಸ್ತುವಾರಿ ಸಚಿವರು

ಮೈಸೂರು, ಅ.24:-ಮೈಸೂರು ಜಿಲ್ಲೆಯ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಆಯುಧ ಪೂಜೆ ಹಾಗೂ ವಿಜಯದಶಮಿ ಶುಭಾಶಯಗಳನ್ನು ತಿಳಿಸಿದ್ದಾರೆ.

2020ರ ವರ್ಷದಲ್ಲಿ ಕೊರೋನಾ ಸಂಕಟ-ಸಂಕಷ್ಟಗಳು ಎಲ್ಲರನ್ನೂ ಬಹಳವಾಗಿ ಕಾಡಿದೆ. ಇದೊಂದು
ರೀತಿಯಲ್ಲಿ ಅಗ್ನಿಪರೀಕ್ಷೆ ಎಂದೇ ಹೇಳಬಹುದಾಗಿದೆ. ಆದರೆ, ಇದನ್ನು
ಹಿಮ್ಮೆಟ್ಟಿಸುವಲ್ಲಿ ಕೋರೋನಾ ವಾರಿಯರ್ಸ್ ಗಳಾದ ವೈದ್ಯರು, ದಾದಿಯರು, ಪೌರಕಾರ್ಮಿಕರು,ಪೊಲೀಸರು, ಸಾಮಾಜಿಕ ಕಾರ್ಯಕರ್ತರ ಸೇವೆ ಗಣನೀಯ. ಇದಲ್ಲದೆ, ಸಾರ್ವಜನಿಕರ ಸಹಕಾರವನ್ನೂ ನಾವು ಮರೆಯುಂತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ಸಾಕಷ್ಟು ಪೂರಕ ಕ್ರಮಗಳನ್ನು
ತೆಗೆದುಕೊಂಡು ಕೊರೋನಾ ತಡೆಗೆ ಮುಂದಾಗಿದೆ. ಈ ಬಾರಿಯ ವಿಜಯದಶಮಿ ಎಲ್ಲರಿಗೂ ಶುಭವನ್ನು
ತರಲಿ, ಸಂಕಷ್ಟಗಳನ್ನು ದೂರ ಮಾಡಿ ವಿಜಯವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
ಸರ್ವರಿಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: