ಪ್ರಮುಖ ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿದಾಸ್ ಗೆ ಕೊರೋನಾ ಸೋಂಕು


ದೇಶ( ನವದೆಹಲಿ)ಅ.25:- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಕೊರೋನಾ ವೈರಸ್ ಸೊಂಕು ತಗುಲಿದೆ.
ಈ ಕುರಿತು ಖುದ್ದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಮಡಿರುವ ಅವರು ತಮಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಕ್ವಾರಂಟೈನ್ ನಲ್ಲಿದ್ದು ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮತ್ತು ದೂರವಾಣಿ ಮೂಲಕ ಎಲ್ಲಾ ಉಪ ಗವರ್ನರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

“ನಾನು ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದೇನೆ. ಆದರೆ ಯಾವ ರೋಗಲಕ್ಷಣಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಪರ್ಕಕ್ಕೆ ಬಂದವರು ಎಚ್ಚರವಾಗಿರಿ. ಕ್ವಾರೆಂಟೈನ್ ನಲ್ಲಿಯೇ ಇದ್ದು ಕೆಲಸ ಮುಂದುವರಿಸುತ್ತೇನೆ. ಸಂಸ್ಥೆಯಲ್ಲಿನ ಕೆಲಸ ಸಾಮಾನ್ಯ ದಿನಗಳಂತೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಹಾಗೂ ದೂರವಾಣಿ ಮೂಲಕ ಸರ್ಕಾರ ಮತ್ತು ಇತರ ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ” ಎಂದು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: