ಪ್ರಮುಖ ಸುದ್ದಿಮೈಸೂರು

ವಿಜಯದಶಮಿಯನ್ನು ವಿಜಯ ಯಾತ್ರೆಯ ಮೂಲಕ ನೆರವೇರಿಸುವ ರಾಜವಂಶಸ್ಥ ಯದುವೀರ್ ಒಡೆಯರ್

ಮೈಸೂರು,ಅ.26:- ಶರನ್ನವರಾತ್ರಿಯ 10ನೇ ದಿನ ಮೈಸೂರು ಅರಮನೆಯಲ್ಲಿ ವಿಜಯ ದಶಮಿಯನ್ನು ವಿಜಯಯಾತ್ರೆ ಮೂಲಕ ಯದುವೀರ್ ನೆರವೇರಿಸುವ ಮೂಲಕ 10 ದಿನದ ಶರನ್ನವರಾತ್ರಿ ಮುಕ್ತಾಯವಾಗಲಿದೆ.

ಶರನ್ನವರಾತ್ರಿಯ 10ನೇ ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಇಂತಿವೆ. ಬೆಳಗ್ಗೆ 9.30ಕ್ಕೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ ಆನೆಗೆ ಪೂಜೆ ನಡೆಯಲಿದೆ. ಬೆಳಗ್ಗೆ 9.45ಕ್ಕೆ ಉತ್ತರ ಪೂಜೆ ಖಾಸಾ ಆಯುಧಗಳಿಗೆ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ 10.20 ರಿಂದ 10.40ರವರೆಗೆ ರಾಜ ಆಯುಧಗಳಿಗೆ ಉತ್ತರ ಪೂಜೆ ನಡೆಯಲಿದೆ. ನಂತರ ಭುವನೇಶ್ವರಿ ದೇವಾಲಯದ ಬಳಿ ಆಯುಧಗಳನ್ನು ವಿಜಯ ಯಾತ್ರೆಯ ಮೂಲಕ ತಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜ ಪೋಷಾಕ್​​ನಲ್ಲಿ ಶಮಿ ಮರದ ಹತ್ತಿರ ವಿಜಯ ಯಾತ್ರೆ ಬಂದು ಶಮಿ ಪೂಜೆ ನೆರವೇರಿಸುತ್ತಾರೆ. ಶಮಿ ಪೂಜೆ ಮುಗಿದ ನಂತರ ಕನ್ನಡಿ ತೊಟ್ಟಿಯಲ್ಲಿರುವ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಜಯ ದಶಮಿ ಆಚರಿಸುತ್ತಾರೆ. ಇವು ವಿಜಯ ದಶಮಿ ದಿನ ರಾಜಮನೆತನದಲ್ಲಿ ನಡೆಯುವ ವಿಜಯ ದಶಮಿಯ ಪೂಜಾ ಕಾರ್ಯಕ್ರಮಗಳಾಗಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: