ಮೈಸೂರು

ಸರಳ ದಸರಾ ಮಾಡಿದ್ದನ್ನು ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ : ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು

ಮೈಸೂರು,ಅ.26:- ಸರ್ಕಾರ ಅತಿ ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿ ಮೈಸೂರಿನಲ್ಲಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆಗೆ ತಯಾರಿ ನಡೆಸಿದ್ದರು. ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ನಗರದ ಅಶೋಕ ರಸ್ತೆಯ ಪುರ ಭವನದ ಎದುರು ಚಳವಳಿ ನಡೆಸಲು ಮುಂದಾದಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದರು.
ಈ ಸಂದರ್ಭ ವಾಟಾಳ್ ನಾಗರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಜ್ಯ ಸರ್ಕಾರ ಜಂಬೂಸವಾರಿಯನ್ನು ಅರಮನೆ ಒಳಗೆ ಬಂಧಿಸಿದ್ದಾರೆ. ಚಾಮುಂಡಿ ತಾಯಿಯನ್ನು ಯಡಿಯೂರಪ್ಪ ನವರ ಸರ್ಕಾರ ಬಂಧಿಸಿದೆ. ನಾನು ಮೈಸೂರು ಪರಂಪರೆಯನ್ನು ಉಳಿಸಲು ಸಾರೋಟು, ಚಾಮುಂಡಿ ಚಿತ್ರ, ಹಾಗೂ ವಾದ್ಯಗಳೊಂದಿಗೆ ಪರಂಪರೆ ಉಳಿಸಲು ಮಾಡಿದ ಪಯತ್ನಕ್ಕೆ ಅಡ್ಡಿಪಡಿಸಿದ್ದಾರೆ. ಯಡಿಯೂರಪ್ಪ ರವರು ಜೈಲಿಗೆ ಹೋಗಿ ಬಂದರೂ ಬುದ್ದಿ ಬಂದಿಲ್ಲ. ಯಡಿಯೂರಪ್ಪ ನವರೇ ನಿಮ್ಮ ದರ್ಪ ಬಿಡಿ, ನಾವು ನಿಮ್ಮ ನೀತಿ ವಿರೋಧಿಸುತ್ತೇನೆ. ನಾನು ಪೊಲೀಸ್ ಪರ. ನಿಮಗೆ ಗೌರವ ಮತ್ತು ಪೊಲೀಸ್ ಬಗ್ಗೆ ಪ್ರೀತಿ ಇದ್ದರೆ ಔರಾದ್ಕರ್ ವರದಿ ಜಾರಿ ಮಾಡಿ. ನೀವು ಅಧಿಕಾರ ದಿಂದ ಕೆಳಗೆ ಇಳಿದರೆ ನಿಮ್ಮನ್ನು ಒಂದು ಬೀದಿ ನಾಯಿ ಸಹಾ ಕೇಳುವುದಿಲ್ಲ. ಸಾರ್ವಜನಿಕ ರಿಗೆ ಚಾಮುಂಡಿ ಹಬ್ಬ ಮಾಡಲು ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅರಮನೆ ಒಳಗೆ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಿರುವ 300 ಜನರಿಗೆ ಕೊರೋನಾ ಬರುವುದಿಲ್ಲವಾ? ಸರ್ಕಾರ ಇಂದು 01 ಲಕ್ಷ ಜನರಿಗೆ ಸೂಕ್ತ ಮುಂಜಾಗ್ರತೆ ವಹಿಸಿ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡ ಬಹುದಿತ್ತು. ರಾಜ್ಯದಲ್ಲಿ ದಿನ ಸಾವಿರಾರು ಜನರು ಕೋವಿಡ್ ನಿಂದ ಸಾಯುತ್ತಿದ್ದಾರೆ. ಕೋವಿಡ್ ನಿಯಂತ್ರಣ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕ ಇಂದು ನೆರೆ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಕೇಂದ್ರ ಸರ್ಕಾರ 50 ಸಾವಿರ ಕೋಟಿ ಪರಿಹಾರ ಮಾಡಬೇಕು. ಈಶಾನ್ಯ ಕ್ಷೇತ್ರದ ಶಿಕ್ಷಕರು ನನಗೆ ಬೆಂಬಲವನ್ನು ನೀಡುವರು. ನಾನೊಬ್ಬ, 224 ಜನ ಶಾಸಕರು ಒಂದೇ ಎನ್ನುತ್ತ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಕೂಡಲೇ ನಗರದ ಲಷ್ಕರ್ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಮುಂಜಾಕ್ರತಾ ಕ್ರಮದಿಂದ ವಶಕ್ಕೆ ಪಡೆದು ಲಷ್ಕರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: