ಪ್ರಮುಖ ಸುದ್ದಿಮೈಸೂರು

ಅರಮನೆಯ ನವರಾತ್ರಿ ಉತ್ಸವ ಸಂಪನ್ನಗೊಳಿಸಿದ ರಾಜವಂಶಸ್ಥ ಯದುವೀರ ಒಡೆಯರ್

ಮೈಸೂರು, ಅ.26:- ಶರವನ್ನವರಾತ್ರಿಯ ಹತ್ತನೇ ದಿನ ವಿಜಯದಶಮಿಯ ದಿನವಾದ ಇಂದು ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶಮೀಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಅರಮನೆಯ ನವರಾತ್ರಿ ಉತ್ಸವವನ್ನು ಸಂಪನ್ನಗೊಳಿಸಿದರು.

ಅರಮನೆಯಲ್ಲಿ ನವರಾತ್ರಿ ದಶಮಿ ಅಂಗವಾಗಿ ಬೆಳಗ್ಗೆ 9.30ಕ್ಕೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು, ಒಂಟೆಗೆ ಪೂಜೆ ಸಲ್ಲಿಸಲಾಯಿತು.ಅನಂತರ 9.45ಕ್ಕೆ ಖಾಸಾ ಆಯುಧಗಳಿಗೆ (ಉತ್ತರ ಪೂಜೆ) ಪೂಜೆ ಸಲ್ಲಿಸಿ 10.20ರಿಂದ 10.40ರವರೆಗೆ ರಾಜ ಆಯುಧಗಳಿಗೆ ಪೂಜೆ ಮಾಡಲಾಯಿತು.

ತದನಂತರ ಯದುವೀರ್ ಒಡೆಯರ್ ಅವರು ರಾಜಪೋಷಾಕಿನಲ್ಲಿ ಅರಮನೆಯಿಂದ ತಾಯಿ ಭುವನೇಶ್ವರಿ ದೇವಾಲಯದ ಬಳಿ ಇರುವ ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಕನ್ನಡಿ ತೊಟ್ಟಿಗೆ ಆಗಮಿಸಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಈ ಮೂಲಕ ಹತ್ತು ದಿನಗಳಿಂದ ಕಂಕಣಬದ್ಧರಾಗಿದ್ದ ಯದುವೀರ ಒಡೆಯರ್ ಅವರು ಇಂದು ಶಮೀ ಪೂಜೆ ಸಲ್ಲಿಸುವ ಮೂಲಕ ಶರವನ್ನರಾತ್ರಿ ಪೂಜೆಯನ್ನು ಸಂಪನ್ನಗೊಳಿಸಿದರು. ಪೂಜೆ ನಂತರ ಯದುವೀರ್ ಅವರು ಕಂಕಣ ವಿಸರ್ಜನೆ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: