ಪ್ರಮುಖ ಸುದ್ದಿಮೈಸೂರು

ಮುಂದಿನ ವರ್ಷ ಅದ್ಧೂರಿ ದಸರಾ ಆಚರಣೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಜೋಡಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್ ವೈ

ಮೈಸೂರು, ಅ.26:-ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಗೂ ಮುನ್ನ ಜೋಡಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಧ್ಯಾಹ್ನ 2.59ರಿಂದ 3.20ರ ಶುಭ ಮಕರ ಲಗ್ನದಲ್ಲಿ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಜೋಡಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.

ಅಗ್ರ ಪೂಜೆಯಾಗಿ ನಂದಿಗೆ ಪೂಜೆ ಸಲ್ಲಿಸಿದ ಬಳಿಕ 3.40 ರಿಂದ 4.15ರವರೆಗಿನ ಕುಂಭ ಲಗ್ನದಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗೆ ಸಿಎಂ ಚಾಲನೆ ನೀಡಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಮೇಯರ್ ತಸ್ನೀಂ ಸೇರಿ ಹಲವರು ಉಪಸ್ಥಿತರಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ ಕೋವಿಡ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗಿದ್ದು ಮುಂದಿನ ವರ್ಷ ಅದ್ಧೂರಿ ದಸರಾ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೊದಲು ವಿಜಯದಶಮಿ ಮೆರವಣಿಗೆ ಉದ್ಘಾಟನೆ ನೆರವೇರಿಸಿದ್ದೇನೆ.
ಮೈಸೂರು ದಸರಾ ಮಹೋತ್ಸವಕ್ಕೆ ಅದರದ್ದೇ ಆದ ಐತಿಹಾಸಿಕ ಪರಂಪರೆ,ಸಾಂಸ್ಕೃತಿಕ ಹಿನ್ನೆಲೆ ಇದೆ. ಭಾರತೀಯ ಸಂಸ್ಕೃತಿ ಯ ಚರಿತ್ರೆಯಲ್ಲಿಇಷ್ಟೊಂದು ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಲು ಸಿಗೋದಿಲ್ಲ. ಬಹಳ ಅಪರೂಪ. ಕನ್ನಡ ನಾಡಿನ ಕಲೆ,ಸಂಸ್ಕೃತಿ ಬಿಂಬಿಸುವ ದೇಶ,ವಿದೇಶದ ಜನರ ಆಕರ್ಷಿಸುವ ದಸರಾ ಹಬ್ಬವನ್ನು ಈ ಬಾರಿ ಕೋವಿಡ್ 19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದೆ. ಸಂಪ್ರದಾಯ ಕ್ಕೆ ಸೀಮಿತವಾಗಿ ಆಚರಣೆ ಮಾಡುವುದು ಈ ಬಾರಿ ಅನಿವಾರ್ಯವಾಗಿತ್ತು. ಜನಸಂದಣಿ ಸೇರದಂತೆ, ದಸರಾ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಿದ್ದ ಬಹುತೇಕ ಕಾರ್ಯಕ್ರಮ ವನ್ನು ಅನಿವಾರ್ಯ ದಿಂದ ರದ್ದು ಪಡಿಸಿದ್ದೇವೆ. ದುಷ್ಟರ ಸಂಹಾರ ಶಿಷ್ಟರ ರಕ್ಷಣೆ ಹಿನ್ನೆಲೆಯ ನಾಡ ಹಬ್ಬ ಇದು. ಹೊಸ ಚೈತನ್ಯ, ಉತ್ಸಾಹ,ಆತ್ಮವಿಶ್ವಾಸ ಮುಡಿಸಿಕೊಳ್ಳಲು ಮುನ್ನಡಿಯಾಗತ್ತೆ. ಕೋವಿಡ್-19 ಹಾಗೂ ಅತಿವೃಷ್ಟಿ ಯಿಂದ ನಾಡಿನ ಜನತೆ ಸಂಕಷ್ಟ ದಲ್ಲಿದ್ದಾರೆ. ಆದ್ರೆ ಇವುಗಳ ವಿರುದ್ಧ ನಾವು ವಿಜಯ ಸಾಧಿಸುತ್ತೇವೆ ಎಂಬ ವಿಶ್ವಾಸ ನಮಗೆಲ್ಲರಿಗೂ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಸಹ ರಾಜ್ಯ ಸರ್ಕಾರ ದೊಂದಿಗೆ ಸಹಕರಿಸಿ ಮುನ್ನೆಚ್ಚರಿಕೆ ವಹಿಸಿ ದ್ದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ಕೋವಿಡ್ 19 ಮತ್ತು ಅತಿವೃಷ್ಟಿ ಯಿಂದ ನಾಡಿನ ಜನತೆಯನ್ನು ಪಾರು ಮಾಡಿ ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಆರೋಗ್ಯ ವನ್ನು ಕರುಣಿಸಲಿ ಎಂದು ದೇವಿ ಯನ್ನು ನಾವೆಲ್ಲ ಪ್ರಾರ್ಥನೆ ಮಾಡುತ್ತೇವೆ. ನಾಡಿನ ಸಮಸ್ತ ಜನತೆಗೂ ಜಗನ್ಮಾತೆ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಸಂಕಷ್ಟದ ಸಮಯದಲ್ಲಿ ದಸರಾ ಆಚರಣೆ ಯಾವ ರೀತಿ ನಡೆಯಿತು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಎಲ್ಲ ಕಡೆ ನಮ್ಮ ಕಾರ್ಯಕ್ರಮ ಏನು ನಿಶ್ಚಯ ಆಗಿತ್ತು. ಜಿಲ್ಲಾಡಳಿತ ಏನು ತೀರ್ಮಾನ ಮಾಡಿತ್ತೋ ಅದರಂತೆ ನಡೆದಿದೆ. ಮುಂದಿನ ವರ್ಷ ಈ ವರ್ಷ ಅದೇನೇನು ಕೊರತೆ ಆಗಿದೆ ಅವೆಲ್ಲವನ್ನೂ ಸೇರಿಸಿಕೊಂಡು ವಿಜೃಂಭಣೆಯಿಂದ ಆಚರಿಸೋದಕ್ಕೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: