ಮೈಸೂರು

ರಾಷ್ಟ್ರೀಯ ಲೋಕ್ ಅದಾಲತ್ ಗೆ ಚಾಲನೆ

ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಮೈಸೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಅಪಘಾತ ಪರಿಹಾರ ಮತ್ತು ಕ್ರಿಮಿನಲ್ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ರಾಷ್ಟ್ರೀಯ ಲೋಕ್ ಅದಾಲತ್ ನ್ನು ಆಯೋಜಿಸಲಾಗಿತ್ತು.

ಕೌಟುಂಬಿಕ ನ್ಯಾಯಾಲಯ ಸೇರಿದಂತೆ ವಿವಿಧ ವಿಭಾಗದ ಹನ್ನೆರಡು ನ್ಯಾಯಾಲಯಗಳಲ್ಲಿ ನಡೆದ ಪ್ರಕರಣ ಇತ್ಯರ್ಥಪಡಿಸಲು ನ್ಯಾಯಾಧೀಶರುಗಳಾದ ಬಿ.ಎಂ.ಮಾರಪ್ಪ, ಸಿ.ಲಕ್ಷ್ಮಿನಾರಾಯಣ, ಎನ್.ಎಸ್.ಮಹದೇವಸ್ವಾಮಿ, ಜಿ.ಎಸ್.ನಾಗರಾಜಪ್ಪ, ಎನ್.ಎಸ್.ಬಸಪ್ಪ, ಎಂ.ಲತಾದೇವಿ, ಡಿ.ಸುಕನ್ಯಾ, ಕೆ.ಲಲಿತಮ್ಮ, ಬಿ.ರಾಜರಾಜೇಶ್ವರಿ, ಎನ್.ಬಿ.ಶ್ರೀದೇವಿ, ಎಂ.ವಿ.ಕಮಲಾ, ಎಂ.ಎಸ್.ರಾಜಪ್ಪ ಪಾಲ್ಗೊಂಡಿದ್ದರು.

ಮೈಸೂರು ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಈ ಅದಾಲತ್ ನಲ್ಲಿ ಸುಮಾರು ಮುನ್ನೂರು ಪ್ರಕರಣಗಳು ಬಂದಿವೆ. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: