ಮೈಸೂರು

ಅನಾಥ ಮಕ್ಕಳಿಗೆ ಸೂರು ಕಟ್ಟಿಸಿಕೊಟ್ಟ ಎ ಎಸ್ ಐ ದೊರೆಸ್ವಾಮಿ

ಮೈಸೂರು,ಅ.28:- ಅನಾಥ ಮಕ್ಕಳಿಗೆ ಸೂರು ಕಟ್ಟಿಸಿಕೊಟ್ಟು ಎ ಎಸ್ ಐ ದೊರೆಸ್ವಾಮಿ ರಕ್ಷಕನಾಗಿದ್ದಾರೆ.
ಎಸ್ ಪಿ ರಿಷ್ಯಂತ್ ಅವರ ಮೆಚ್ಚುಗೆಗೆ ಪೊಲೀಸ್ ಪಾತ್ರರಾಗಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನ ಶಿರಮಳ್ಳಿ ಗ್ರಾಮದ ಅನಾಥ ಮಕ್ಕಳನ್ನು ಪೊಲೀಸ್ ಅಧಿಕಾರಿಯೊಬ್ಬರು ದತ್ತು ತೆಗೆದುಕೊಂಡಿರುವುದು ವಿಶೇಷ ವಾಗಿ ಗಮನಾರ್ಹವಾಗಿದೆ. ತಾಲೂಕಿನ ಪೊಲೀಸ್ ಇಲಾಖೆಯಲ್ಲಿ ಎ ಎಸ್ ಐ ಆಗಿ ಕೆಲಸ ನಿರ್ವಹಿಸಿದ್ದು ಶಿರಮಳ್ಳಿ ಗ್ರಾಮದ ದೊಡ್ಡೆಗೌಡ ಮತ್ತು ಸಣ್ಣಮ್ಮ ಎಂಬವರು 8 ವರ್ಷದ ಹಿಂದೆಯೇ ನಿಧನರಾಗಿದ್ದು ಇವರ ಮಕ್ಕಳಾದ ಜ್ಯೋತಿ ಮತ್ತು ಮಣಿಗೆ ದಿಕ್ಕು ತೋಚದಂತಾಗಿದ್ದು ಇವರ ಪಾಲಿಗೆ ಹಣತೆಯ ದೀಪದಂತೆ ಎ‌ ಎಸ್ ಐ ದೊರೆಸ್ವಾಮಿ ನೆರವಾಗಿದ್ದಾರೆ. ಇವರದ್ದೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: