ಮೈಸೂರು

ಇಂದು ವಿದ್ಯುತ್ ವ್ಯತ್ಯಯ

ಮೈಸೂರು.ಅ.29:- ಚಾಮುಂಡೇಶ್ವರಿ ವಿದ್ಯುತ್ ವಿತರಣಾ ನಿಗಮ ವತಿಯಿಂದ 66/11 ಕೆ.ವಿ. ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಎಲ್.ಎಫ್-4 ಫೀಡರ್‍ನಲ್ಲಿ ಅಕ್ಟೊಬರ್ 29 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಮೊಹಮ್ಮದ್ ಸೇಠ್ ಬ್ಲಾಕ್, ಗಾಂಧಿನಗರ, ಅಲ್‍ಅನ್ಸ್ ಆಸ್ಪತ್ರೆ, ಜೆ.ಪಿ. ಪ್ಯಾಲೇಸ್, ಕರ್ನಾಟಕ ಪೊಲೀಸ್ ಅಕಾಡೆಮಿ, ಸಬರ್ಬ್ ಬಸ್ ಸ್ಟ್ಯಾಂಡ್, ಬೆಂಗಳೂರು-ನೀಲಗಿರಿ ರಸ್ತೆ, ದಾವೂದ್ ಖಾನ್ ರಸ್ತೆ, ಅಶೋಕ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: