ಕರ್ನಾಟಕ

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್

ಖ್ಯಾತ ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಬಚ್ಚನ್  ಹಲವು ದಿನಗಳ ಬಳಿಕ ಮಂಗಳೂರಿಗೆ ಆಗಮಿಸಿದರು.
ಮುಂಬೈನಿಂದ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ಐಶ್ವರ್ಯ ಜೊತೆಗೆ ಪುತ್ರಿ ಆರಾಧ್ಯಾ, ತಾಯಿ ಹಾಗೂ ಕುಟುಂಬ ಸದಸ್ಯರು ಜೊತೆಗಿದ್ದರು.
ಇತ್ತೀಚೆಗೆ ಮುಂಬೈಯಲ್ಲಿ ನಿಧನರಾದ  ತಂದೆ ಕೃಷ್ಣರಾಜ್ ರೈ ಅವರ ಪಿಂಡ ಪ್ರದಾನ ಮಾಡಲೆಂದು  ಮಂಗಳೂರಿಗೆ ಸಹೋದರ ಆದಿತ್ಯ ರೈ ಜೊತೆ ಆಗಮಿಸಿದ ಅವರು ಪುತ್ತೂರು ಬಳಿಯ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ -ಕುಮಾರಧಾರಾ ಸಂಗಮ ಕ್ಷೇತ್ರದಲ್ಲಿ ತಂದೆಯ ಪಿಂಡ ಪ್ರದಾನ ಮಾಡಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: