ದೇಶಪ್ರಮುಖ ಸುದ್ದಿ

ಕೊರೋನಾ ಲಸಿಕೆ ಬಂದಾಗ ಪ್ರತಿಯೊಬ್ಬ ದೇಶವಾಸಿಗೂ ಲಸಿಕೆ : ಫ್ರಂಟ್ ಲೈನ್ ಕಾರ್ಮಿಕರಿಗೆ ಆದ್ಯತೆ ; ಪ್ರಧಾನಿ ಮೋದಿ

ದೇಶ(ನವದೆಹಲಿ)ಅ.29:- ಕೊರೋನಾ ವೈರಸ್ ಲಸಿಕೆ ಬಂದ ನಂತರ ಪ್ರತಿಯೊಬ್ಬ ದೇಶವಾಸಿಗೂ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೋನಾ ಅವಧಿಯಲ್ಲಿನ ತಮ್ಮ ಮೊದಲ ಸಂದರ್ಶನದಲ್ಲಿ ಇಂಗ್ಲಿಷ್ ಪತ್ರಿಕೆಯೊಂದರೊಂದಿಗೆ ಮಾತನಾಡಿದ ಪಿಎಂ ಮೋದಿ, ದೇಶದ ಕೊನೆಯ ವ್ಯಕ್ತಿಗೂ ಲಸಿಕೆ ತಲುಪಿಸುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಿಎಂ ಮೋದಿ ಅವರ ಪ್ರಕಾರ, ವ್ಯಾಕ್ಸಿನೇಷನ್ ಅಭಿಯಾನದ ಆರಂಭದಲ್ಲಿ, ಕೊರೋನ ಅಪಾಯ ಯಾರಿಗಿದೆ ಅವರಿಗೆ ಮೊದಲು ನೀಡಲಾಗುವುದು. ಕೊರೋನಾದ ಹೊರತಾಗಿಯೂ 2024 ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಬಹುದು. ದೇಶದ ಆರ್ಥಿಕತೆಯು ನಿರೀಕ್ಷೆಗಿಂತ ವೇಗದಲ್ಲಿ ಮರಳುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
“ಲಸಿಕೆ ಲಭ್ಯವಾದ ಕೂಡಲೇ ಎಲ್ಲಾ ದೇಶವಾಸಿಗಳಿಗೆ ಲಸಿಕೆ ನೀಡಲಾಗುವುದು ಎಂದು ನಾನು ಮೊದಲು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಯಾರೂ ಲಸಿಕೆಯಿಂದ ವಂಚಿತರಾಗುವುದಿಲ್ಲ. ಯಾರಿಗೆ ಕೊರೋನಾ ಅಪಾಯವಿದೆಯೋ ಅವರಿಗೆ ಮೊಲದು ಲಸಿಕೆಯನ್ನು ನೀಡಲಾಗುವುದು. ನಮ್ಮ ಆರೋಗ್ಯ ಕಾರ್ಯಕರ್ತರಂತೆ ಲಸಿಕೆ ವಿತರಣೆಗಾಗಿ, ನಾವು ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಿದ್ದೇವೆ. ಲಸಿಕೆ ಸಂಶೋಧನಾ ಕಾರ್ಯ ಇನ್ನೂ ನಡೆಯುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಪ್ರಯೋಗಗಳು ನಡೆಯುತ್ತಿವೆ. ಪ್ರಸ್ತುತ, ಲಸಿಕೆಯ ಎಷ್ಟು ಪ್ರಮಾಣವನ್ನು ನೀಡಲಾಗುವುದು ಅಥವಾ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ತಜ್ಞರು ಕ್ರಮ ಕೈಗೊಂಡು ಎಲ್ಲ ವಿಷಯಗಳನ್ನು ಅಧ್ಯಯನ ಮಾಡಿದ ನಂತರ, ಲಸಿಕೆಯನ್ನು ವಿತರಿಸುವುದು ಸುಲಭ ಎಂದಿದ್ದಾರೆ.
28,000 ಕ್ಕೂ ಹೆಚ್ಚು ಚೈನ್ ಪಾಯಿಂಟ್ಗಳು ಸಿದ್ಧವಾಗಿದ್ದು, ಇದು ಲಸಿಕೆಯನ್ನು ಸಂಗ್ರಹಿಸುತ್ತದಲ್ಲದೆ ಲಸಿಕೆಯನ್ನು ಸಮಾಜದ ಕೊನೆಯ ವ್ಯಕ್ತಿಗೆ ತಲುಪಿಸುತ್ತದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ಸ್ಥಳೀಯ ಮಟ್ಟದಲ್ಲಿಯೂ ಲಸಿಕೆ ವಿತರಿಸಲು ತಂಡವು ಹಂತ ಹಂತವಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ.
ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಕೆಲಸ ಮಾಡಲಾಗುತ್ತಿದ್ದು, ಲಸಿಕೆ ನೋಂದಣಿ, ಟ್ರ್ಯಾಕಿಂಗ್ ಮತ್ತು ಪ್ರವೇಶ ತಿಳಿದುಬರುತ್ತದೆ. ಲಸಿಕೆ ಸಿದ್ಧವಾದ ಕೂಡಲೇ ಲಸಿಕೆಯನ್ನು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಬಹಳ ಕಡಿಮೆ ಸಮಯದಲ್ಲಿ ತಲುಪಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: