
ಮೈಸೂರು
ವೈಯುಕ್ತಿಕ ದ್ವೇಷಕ್ಕೆ ಮನೆಯ ಮೇಲೆ ಕಲ್ಲೆಸೆದ ದುಷ್ಕರ್ಮಿಗಳು : ಹಾನಿ
ಮೈಸೂರು,ಅ.29:- ವೈಯುಕ್ತಿಕ ದ್ವೇಷಕ್ಕೆ ದುಷ್ಕರ್ಮಿಗಳು ಮನೆಯ ಮೇಲೆ ಕಲ್ಲೆಸೆದು ಧ್ವಂಸ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮನೆಯ ಮೇಲ್ಛಾವಣಿ, ವಸ್ತುಗಳಿಗೆ ಹಾನಿಯಾಗಿದೆ. ಚರಂಡಿ ವಿಚಾರವಾಗಿ ಹರಿಕಥೆ ಕಲಾವಿದ ಸಚಿನ್ ಹಾಗೂ ಪಕ್ಕದ ಮನೆಯ ಸುರೇಶ್ ನಡುವೆ ಜಗಳವಾಗಿತ್ತು. ಈ ಜಗಳ ದ್ವೇಷಕ್ಕೆ ತಿರುಗಿ ಸುರೇಶ್, ಸಚಿನ್ ಎಂಬವರ ಮನೆಯ ಮೇಲ್ಛಾವಣಿ ಮೇಲೆ ಕಲ್ಲೆಸೆದು ಧ್ವಂಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿದೆ ಎನ್ನಲಾಗಿದೆ.
ಸಚಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದೃಷ್ಕೃತ್ಯ ನಡೆದಿದೆ. ಮನೆಯ ಮೇಲ್ಛಾವಣಿ ಒಡೆದು ಹೋಗಿರುವ ಪರಿಣಾಮ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)