ಮನರಂಜನೆ

ಟಾಲಿವುಡ್‍ ಪ್ರವೇಶಕ್ಕೆ ರಶ್ಮಿಕಾ ಮಂದಣ್ಣ ಸಿದ್ಧತೆ?

ಕನ್ನಡದ ಇತ್ತೀಚಿನ ಯಶಸ್ವಿ ಚಲನಚಿತ್ರ ಕಿರಿಕ್ ಪಾರ್ಟಿಯ ಮೊದಲರ್ಧದ ನಾಯಕಿ ನಟಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್‍ಗೆ ಪ್ರವೇಶಿಸಲಿದ್ದಾರೆ ಎನ್ನುವ ಗಾಸಿಪ್ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದು, ಈಗ ಪರೀಕ್ಷೆ ಹಾಗೂ ಓದಿನಲ್ಲಿ ಬ್ಯೂಸಿಯಾಗಿದ್ದಾರೆ. ಇದರೊಟ್ಟಿಗೆ ತೆಲುಗು ಭಾಷೆಯನ್ನು ಕಲಿಯುತ್ತಿದ್ದು, ತೆಲುಗಿನ ನಾಣಿ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾರೆಂದು ಗಾಳಿ ಮಾತು ಹರಿದಾಡುತ್ತಿದೆ. ಸದ್ಯಕ್ಕೆ ಈಕೆ ಪರೀಕ್ಷೆ ತಯಾರಿಯಲ್ಲಿ ಬ್ಯೂಸಿಯಾಗಿದ್ದಾಳೆ.

ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ದರ್ಶನ್ ಅಭಿನಯದ ತಾರಕ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ರಶ್ಮಿಕಾ ಬದಲು ಸಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸ್ಯಾಂಡಲ್‍ವುಡ್‍ನಲ್ಲಿ ಕಳೆದುಕೊಂಡ ಅವಕಾಶ ಟಾಲಿವುಡ್‍ನಲ್ಲಿ ರಶ್ಮಿಕಾಗೆ ದೊರೆತಿದೆ ಎಂದು ಗಾಂಧಿನಗರದಲ್ಲಿ ಗುಸುಗುಸು ಶುರುವಾಗಿದೆ.

(ಕೆ.ಎಂ.ಆರ್)

Leave a Reply

comments

Related Articles

error: