ಕರ್ನಾಟಕಪ್ರಮುಖ ಸುದ್ದಿ

ಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಪ್ರಕರಣ: ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆ

ಕುಷ್ಠಗಿ (ಕೊಪ್ಪಳ),ಅ.19-ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಗಂಗಾ ಕುಲಕರ್ಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣದ ಸಂಬಂಧ ಗಂಗಾ ಕುಲಕರ್ಣಿ ಇಂದು ಕೊಪ್ಪಳ ಜಿಲ್ಲೆಯ ಕುಷ್ಠಗಿಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆದರೆ ಈ ವೇಳೆ ನ್ಯಾಯಾಲಯ ಆವರಣದಲ್ಲಿ ಆಕೆ ಕುಸಿದು ಬಿದ್ದರು. ಕೂಡಲೇ ಗಂಗಾ ಕುಲಕರ್ಣಿಯನ್ನು ಆಸ್ಪತ್ರೆ ದಾಖಲಿಸಲಾಯಿತು. ಕೋರ್ಟ್ ಗೆ ಆಗಮಿಸುವ ಮೊದಲೇ ಆಕೆ ವಿಷ ಸೇವನೆ ಮಾಡಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗಂಗಾ ಕುಲಕರ್ಣಿ ಸಾವನ್ನಪ್ಪಿದ್ದಾರೆ.

ಕಲ್ಯಾಣ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾ, ಕಲ್ಯಾಣ್ ಅವರ ದಾಂಪತ್ಯ ಜೀವನದಲ್ಲಿ ಒಡಕು ಮೂಡಲು ಕಾರಣರಾಗಿದ್ದರು. ಇದರಿಂದ ಕಲ್ಯಾಣ್ ಅವರ ಪತ್ನಿ ಅಶ್ವಿನಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದರು.

ಗಂಗಾ, ಶಿವಾನಂದ ವಾಲಿ ಎಂಬ ಮಂತ್ರವಾದಿ ಜೊತೆ ಸೇರಿ ವಂಚನೆಯಲ್ಲಿ ತೊಡಗಿದ್ದರು. ಕಲ್ಯಾಣ್ ಪತ್ನಿ ಅಶ್ವಿಯವರನ್ನು ವಂಚಿಸಿ, ವಶೀಕರಣ ಮಾಡಿದ್ದರು. ಅಲ್ಲದೆ ಆ ಮಂತ್ರವಾದಿ ಅಶ್ವಿನಿ ತಂದೆ-ತಾಯಿಗೆ ಸೇರಿದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದರಂತೆ. ಕಲ್ಯಾಣ್ ಅವರು ಮನೆ ಕೆಲಸದಾಕೆ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ಸತ್ಯ ಬಯಲಿಗೆ ಬಂದಿತ್ತು.

ಸದ್ಯ ಕಲ್ಯಾಣ್ ಅವರ ದಾಂಪತ್ಯ ಜೀವನದಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿದೆ. ಅಶ್ವಿನಿ ಅವರು ವಿಚ್ಛೇದನದ ಅರ್ಜಿಯನ್ನು ವಾಪಸ್ ಪಡೆದಿದ್ದು, ಕಲ್ಯಾಣ್ ಅವರೊಂದಿಗೆ ಸಂತೋಷದಿಂದ ಹೊಸ ಜೀವನ ಪ್ರಾರಂಭಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: