ಕ್ರೀಡೆಮೈಸೂರು

ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ : ಎಟಿಎಂಇ ಗೆ ದ್ವಿತೀಯ ಸ್ಥಾನ

ಮೈಸೂರು  ಶ್ರೀಜಯಚಾಮರಾಜೇಂದ್ರ  ಇಂಜಿನಿಯರಿಂಗ್ ಕಾಲೇಜು  ಆಯೋಜಿಸಿದ್ದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ  ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜು  ದ್ವಿತೀಯ ಸ್ಥಾನಗಳಿಸಿದೆ.

ಕಾಲೇಜಿನ ಕ್ರಿಕೆಟ್ ತಂಡದಲ್ಲಿ ಸಚಿನ್.ಎಸ್, ವೇದಿತ್ ಉತ್ತಯ್ಯ, ಪ್ರಫುಲ್, ಸ್ವಾಗತ್, ಕಾರ್ತಿಕ್, ತ್ಯೂಜಿ ಜೋಸೆಫ್, ನಿತೀನ್, ಕಾರ್ತಿಕ್, ಪ್ರಶಾಂತ್ ಎಸ್.ವಿ. ಆಶಿಶ್, ಸಂತೋಷ್, ಗೌತಮ್, ಯೋಗೀಶ್, ಚಿರಂತ್, ಮನೋಹರ್, ಪ್ರಮಥ್ ಹಾಗೂ ಆಕ್ಷಯ್ ಸಿ.ಎಂ. ಇವರುಗಳು ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ ಆಡಳಿತ ವರ್ಗ,  ಸಿಬ್ಬಂದಿ ವರ್ಗ ಹಾಗೂ ಪ್ರಾಂಶುಪಾಲ ಡಾ.ಎಲ್.ಬಸವರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಮುರಳಿಧರ್ ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: