ಮೈಸೂರು

ಭ್ರಷ್ಟಾಚಾರ ಆರೋಪ : ಎಸಿಬಿ ತನಿಖೆ ವಿಳಂಬವಾಗಿದ್ದಕ್ಕೆ ಪ್ರಧಾನಿಗೆ ಪತ್ರ

ಹಲವು ಭ್ರಷ್ಟಾಚಾರ ಆರೋಪ ಕುರಿತಂತೆ ಎಸಿಬಿಗೆ ದೂರು ನೀಡಿದ್ದರೂ ತನಿಖೆ ವಿಳಂಬವಾಗುತ್ತಿರುವ ಕಾರಣ ಪ್ರಧಾನಿಯವರಿಗೆ ಪತ್ರ ಬರೆದಿದ್ದು ಅವರಿಂದ ಉತ್ತರ ಬಂದಿದೆ ಎಂದು ವೀರ ಕನ್ನಡಿಗರ ಮಕ್ಕಳ ಬಳಗದ ಅಧ್ಯಕ್ಷ ಎಸ್.ಸಿ. ರಾಜೇಶ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವ ಹಾಗೂ ರಾಜ್ಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತಂತೆ ಎಸಿಬಿಗೆ ತಾವು ದೂರು ನೀಡಿದ್ದರೂ ತನಿಖೆ ಪ್ರಕ್ರಿಯೆ ವಿಳಂಬವಾಗಿರುವುದನ್ನು ವಿರೋಧಿಸಿ ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಪ್ರಧಾನಿಗೆ ಬರೆದಿದ್ದ ಪತ್ರಕ್ಕೆ ಉತ್ತರ ಬಂದಿದೆ. ಈ ಕುರಿತು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯದ ಅಧೀನ ಕಾರ್ಯದರ್ಶಿ ಅವರಿಂದ ತಮಗೆ ಪತ್ರ ಬಂದಿದೆ ಎಂದು ತಿಳಿಸಿದರು.

Leave a Reply

comments

Related Articles

error: