Uncategorized

ಬೆಟ್ಟದಿಂದ ಉರುಳಿ ಬಿದ್ದ ವ್ಯಾನ್: 7 ಮಂದಿ ದಾರುಣ ಸಾವು

ವಿಜಯವಾಡ,ಅ.30-ಮದುವೆ ಸಮಾರಂಭ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವಾಹನದ ಬ್ರೇಕ್​ ಫೇಲ್​ ಆದ ಕಾರಣ ಬೆಟ್ಟದಿಂದ ಕೆಳಗಡೆ ಉರುಳಿ, 7 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ಈಸ್ಟ್​ ಗೋದಾವರಿ ಜಿಲ್ಲೆಯ ತಂತಿಕೊಂಡ ಜಿಲ್ಲೆಯಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಂತಿಕೊಂಡಾ ಘಾಟ್​ ರಸ್ತೆಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ದುರ್ಘಟನೆ ಸಂಭವಿಸಿದೆ.

ಗುರುವಾರ ರಾತ್ರಿ ಮದುವೆ ಮುಗಿಸಿಕೊಂಡು ಶುಕ್ರವಾರ ಬೆಳಿಗ್ಗೆ ಊರಿನ ಕಡೆಗೆ ಗಂಡಿನ ಕಡೆಯವರು ವ್ಯಾನ್​ನಲ್ಲಿ ಹೊರಟ್ಟಿದ್ದರು. ಮದುವೆ ಮಂಟಪದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವ್ಯಾನ್​ ಬೆಟ್ಟದಿಂದ ಕೆಳಕ್ಕೆ ಉರುಳಿದೆ. ಏಳು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಗೋಕವರಂ ಮಂಡಲದ ಠಾಕೂರ್‌ಪಾಲೆಂ ಗ್ರಾಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ರಜಮುಂಡ್ರಿ ಗ್ರಾಮಾಂತರ ಪೊಲೀಸ್​ ವರಿಷ್ಠಾಧಿಕಾರಿ ಬಾಜ್​ಪೇಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಶವಪರೀಕ್ಷೆಗೆಂದು ರಾಜಮುಂಡ್ರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್​, ಎಂ.ಎನ್)

Leave a Reply

comments

Related Articles

error: