ಮೈಸೂರು

ಲಿಂಗಾಬುಧಿ ಅರಣ್ಯಪ್ರದೇಶದಲ್ಲಿ ನಡೆದ ಮರಗಳ್ಳತನ ಪ್ರಕರಣ : ಮೂವರ ಬಂಧನ

ಮೈಸೂರಿನ ದಟ್ಟಗಳ್ಳಿ ಬಳಿ ಇರುವ ಲಿಂಗಾಬುಧಿ ಕೆರೆಯ ಸಮೀಪ ಗಂಧದ ಮರವನ್ನು ಕದಿಯಲು ಬಂದ ಮರಗಳ್ಳರು ಮತ್ತು ಅರಣ್ಯ ಸಿಬ್ಬಂದಿಗಳ ನಡುವೆ ಫೆ.11 ರಂದು ಬೆಳಗಿನ ಜಾವ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಏಳುಮಂದಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹೆಚ್.ಡಿ.ಕೋಟೆ ಮೂಲದ ಗುರು, ಸ್ವಾಮಿ.ಚಿಕ್ಕಸ್ವಾಮಿ ಎಂದು ಗುರುತಿಸಲಾಗಿದೆ. ಮರಗಳ್ಳರ ಕುರಿತಂತೆ ಈ ಮೊದಲೇ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕುವೆಂಪುನಗರ  ಠಾಣೆ ಪೊಲೀಸರ ಜೊತೆ ಸಿಸಿಬಿ ಪೊಲೀಸರೂ ಆರೋಪಿಗಳ  ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.  ಗುಂಡ್ಲುಪೇಟೆ ರಿಂಗ್ ರಸ್ತೆಯಲ್ಲಿ ಆರೋಪಿಗಳಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು  ಅರಣ್ಯ ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ.

ಹಿನ್ನಲೆ : ಫೆ.9ರಂದು  ಲಿಂಗಾಬುಧಿ ಕೆರೆಯ ಬಳಿ ಚಿರತೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಬೋನನ್ನು ಇರಿಸಲಾಗಿದ್ದು, ಅರಣ್ಯ ಸಿಬ್ಬಂದಿಗಳು ಇತ್ತ ನಿಗಾ ವಹಿಸಿದ್ದರು. ಇದೇ ವೇಳೆ ಎಂಟು ಮಂದಿಯನ್ನೊಳಗೊಂಡ ಮರಗಳ್ಳರ ತಂಡವೊಂದು ಅಲ್ಲಿಗೆ ಆಗಮಿಸಿದ್ದು, ಮರ ಕದಿಯಲು ಮುಂದಾಗಿದ್ದಾರೆ. ತಕ್ಷಣ ಮಾಹಿತಿ ಸಿಕ್ಕ ಪರಿಣಾಮ ಅರಣ್ಯ ಸಿಬ್ಬಂದಿಗಳು ಮರಗಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಅವರು ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮರಗಳ್ಳರೂ ಗುಂಡು ಹಾರಿಸಿದ್ದು, ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ಮರಗಳ್ಳರ ತಂಡದಲ್ಲಿದ್ದ ವ್ಯಕ್ತಿಯೋರ್ವನಿಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದ ಏಳುಮಂದಿ ಪರಾರಿಯಾಗಿದ್ದರು.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್ ಜಗದೀಶ್  ಹಾಗೂ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಕೈ ಮೇಲೆ ರವಿಕೃಷ್ಣ ಎಂಬ ಹಚ್ಚೆಗುರುತಿದ್ದು,  ಸ್ಥಳದಲ್ಲಿ ಚೀಲವೊಂದು ಪತ್ತೆಯಾಗಿದ್ದು, ಅದರಲ್ಲಿ 15ರಿಂದ 20 ಗಂಧದ ತುಂಡುಗಳು, ಕತ್ತಿ, ಮರ ಕತ್ತರಿಸುವ ಮಶಿನ್ ಗಳು ಲಭಿಸಿದ್ದವು. ಅರಣ್ಯಾಧಿಕಾರಿ ಕರಿಕಾಳನ್ ಸೇರಿದಂತೆ ಮೈಸೂರು ವಲಯ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: