
ಮೈಸೂರು
ಮೈಸೂರಿನಲ್ಲಿಂದು 161 ಮಂದಿಯಲ್ಲಿ ಕೊರೊನಾ ಪತ್ತೆ : ಕಡಿಮೆ ಆಗುತ್ತಿದೆ ಸೋಂಕಿತರ ಸಂಖ್ಯೆ
ಮೈಸೂರು,ಅ31:- ಮೈಸೂರಿನ ಜನರಿಗೆ ಗುಡ್ ನ್ಯೂಸ್, ಏಕೆಂದರೆ ಮೈಸೂರಿನಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರು ಕಡಿಮೆಯಾಗಿ, ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣ ಮೈಸೂರು ಕೊರೊನಾದಿಂದ ಅತಿ ಶೀಘ್ರದಲ್ಲೇ ಮುಕ್ತವಾಗುತ್ತದೆ ಎಂಬ ವಿಶ್ವಾಸವಿದೆ.
ಮೈಸೂರಿನಲ್ಲಿ ಇಂದು 161 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕೊರೊನಾದಿಂದ ಗುಣಮುಖರಾಗಿ 307 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾದಿಂದ ಸಾವಿಗೀಡಾಗುವವರ ಸಂಖ್ಯೆ ಕೂಡ ಕಡಿಮೆಯಾಗಿ ಇಂದು ಇಬ್ಬರು ಮೃತಪಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)