ಮೈಸೂರು

ನಂಜನಗೂಡಿನಲ್ಲಿ ಮತದಾರರಿಂದ ಹಕ್ಕು ಚಲಾವಣೆ

ಜಿದ್ದಾಜಿದ್ದಿ ಕಣವಾಗಿರುವ ನಂಜನಗೂಡು ವಿಧಾನ ಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಮತದಾನ  ಆರಂಭವಾಗಿದೆ. ಬೆಳಿಗ್ಗೆ 7ಗಂಟೆಯಿಂದಲೇ ಮತದಾನ  ಆರಂಭವಾಗಿದ್ದು, ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅರೆಸೇನಾ ಪಡೆಗಳ 6ತುಕಡಿ, 2000ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಹದ್ದಿನ ಕಣ್ಣಿರಿಸಿದ್ದಾರೆ. ಇದೇ ಮೊದಲ ಬಾರಿಗೆ ವಿವಿ ಪ್ಯಾಟ್ ಯಂತ್ರ ಬಳಕೆ ಮಾಡಲಾಗುತ್ತಿದ್ದು, ಮತದಾರರು ತಾವು ನೀಡಿದ ಮತ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಒಟ್ಟು 354 ಕಂಟ್ರೋಲ್ ಯೂನಿಟ್, 307ಬ್ಯಾಲೆಟ್ ಯೂನಿಟ್, 366ವಿವಿ ಪ್ಯಾಟ್ ಗಳನ್ನು ಹಂಚಲಾಗಿದೆ.

ಸಿಸಿ ಕ್ಯಾಮರಾ ಪ್ರತಿಯೊಬ್ಬರ ಚಲನವಲನದ ಮೇಲೂ ಕಣ್ಣಿರಿಸಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: