ಪ್ರಮುಖ ಸುದ್ದಿಮೈಸೂರು

ಐರ್ಲೆಂಡ್ ನಲ್ಲಿ ಮೈಸೂರು ಮೂಲದ ಮಹಿಳೆ , ಆಕೆಯ ಮಕ್ಕಳ ಹತ್ಯೆ ಶಂಕೆ

ಮೈಸೂರು,ನ.2:- ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಐರ್ಲೆಂಡ್ ನ ಬೆಲ್ಲಿನ್ ಫೀರ್ ಎಂಬಲ್ಲಿ ಬುಧವಾರ ಹತ್ಯೆಗೀಡಾಗಿದ್ದು ಗಂಡನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಹಲಗನಹಳ್ಳಿ ಗಫಾರ್ ಅಹ್ಮದ್ ಅವರ ಪುತ್ರಿ ಸೀಮಾ ಬಾನು(37), ಆಕೆಯ ಮಕ್ಕಳಾದ ಆಫೀರಾ ರಿಜಾ(11), ಸೈಯದ್ ಫೈಜಾನ್(6) ಮೃತಪಟ್ಟವರಾಗಿದ್ದಾರೆ. ಮೈಸೂರಿನಲ್ಲಿ ನೆಲೆಸಿದ್ದ ಆಂಧ್ರಪ್ರದೇಶದ ಸೈಯದ್ ಅಬ್ದುಲ್ ಗೆ 13ವರ್ಷಗಳ ಹಿಂದೆ ಸೀಮಾ ಭಾನು ಅವರನ್ನು ಹಲಗನಹಳ್ಳಿ ಗ್ರಾಮದಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಸೈಯದ್ಅಬ್ದುಲ್ ತಂದೆ ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿದ್ದರಿಂದ ನಿವೃತ್ತಿಯ ಬಳಿಕ ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಮನೆ ಖರೀದಿಸಿ ವಾಸ್ತವ್ಯವಿದ್ದರು. ದ್ವಿಯೀಯ ಪಿಯುಸಿ ಅಷ್ಟೇ ಓದಿದ್ದ ಸೈಯದ್ ಅಬ್ದುಲ್ ಗೆ ಸೀಮಾ ಪಾಲಕರೇ ಹಣ ಖರ್ಚು ಮಾಡಿ ಉನ್ನತ ಶಿಕ್ಷಣ ಕೊಡಿಸಿ ಸಾಫ್ಟ್ ವೇರ್ ಇಂಜಿನಿಯರ್ ನ್ನಾಗಿ ಮಾಡಿದರು. ಬಳಿಕ ಚೆನ್ನೈ, ಹೈದ್ರಾಬಾದ್, ಬೆಂಗಳೂರು ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿ ದುಬೈ ಗೆ ತೆರಳಿದ್ದ. ಸೀಮಾಬಾನುಗೆ ಪಾಲಕರು ಮೈಸೂರಿನ ನಾಯ್ಡು ನಗರದಲ್ಲಿ ಮನೆ ಮಾಡಿಕೊಟ್ಟಿದ್ದರು.
ಪತ್ನಿ ಕೇವಲ ಏಳನೇ ತರಗತಿ ಓದಿದ್ದಾಳೆಂದು ಕೀಳರಿಮೆ ಹೊಂದಿದ್ದ ಸೈಯದ್ ಅಬ್ದುಲ್ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಅನೇಕ ಬಾರಿ ದೈಹಿಕ ಹಿಂದಸೆಯನ್ನೂ ನೀಡಿದ್ದಾನೆಂದು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಸಿಮಾಬಾನು ದೂರು ನೀಡಿದ್ದರು. ಕ್ರಿಮಿನಲ್ ಪ್ರಕರಣ ದಾಖಲಾದರೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲವೆಂದು ಹೆಂಡತಿಯನ್ನು ಪುಸಲಾಯಿಸಿ ದೂರನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಎಂದು ಮೃತಳ ಸಹೋದರ ರಿಜ್ವಾನ್ ಮಾಹಿತಿ ನೀಡಿದ್ದಾರೆ. ಐರ್ಲೆಂಡ್ ಗೆ ಪತ್ನಿ ಮಕ್ಕಳನ್ನು ಕರೆಸಿಕೊಂಡ ಸೈಯದ್ ಅಬ್ದುಲ್ ಅಲ್ಲಿಯೂ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಕುರಿತು ಸೀಮಾಬಾನು ದೂರವಾಣಿ ಮೂಲಕ ಪಾಲಕರಿಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಕಳೆದ ಬುಧವಾರ ಐರ್ಲೆಂಡ್ ನಲ್ಲಿ ಸೀಮಾಬಾನು ಮತ್ತು ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಐರ್ಲೆಂಡ್ ಪೊಲೀಸರು ಪಾಲಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವಿದೇಶಾಂಗ ಇಲಾಖೆಯ ಸಹಕಾರದೊಂದಿಗೆ ಮೃತದೇಹಗಳನ್ನು ಭಾರತಕ್ಕೆ ತರಿಸುವ ಪರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: