ಮೈಸೂರು

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿ ಸಂಹಿತೆ ಉಲ್ಲಂಘನೆ?

ನಂಜನಗೂಡು ವಿಧಾನಸಭಾ ಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ  ಕಳಲೆ ಕೇಶವ ಮೂರ್ತಿ ಕಳಲೆ ಗ್ರಾಮ ಪಂಚಾಯತ್ ಲೋಕ ಶಿಕ್ಷಣ ಕೇಂದ್ರ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಆದರೆ ಇದೀಗ ಅವರು ನೀತಿ ಸಂಹಿತೆ ಉಲ್ಲಂಘಿಸಿದರೇ ಎಂಬ ಪ್ರಶ್ನೆ ಕಾಡಿದೆ.
ಮತಗಟ್ಟೆ ಸಂಖ್ಯೆ 119ರಲ್ಲಿ ಮತಚಲಾಯಿಸಿದ  ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಪಕ್ಷದ ಶಾಲನ್ನು ಕುತ್ತಿಗೆಯ ಸುತ್ತ ಹಾಕಿಯೇ ಮತ ಚಲಾಯಿಸಿದ್ದಾರೆ.

ಮತದಾನ ನಡೆಯುವ 100ಮೀಟರ್ ಅಂತರದಲ್ಲಿ ಪಕ್ಷದ ಚಿಹ್ನೆ ಬಳಸುವಂತಿಲ್ಲ. ಆದರೆ ಪಕ್ಷದ ಶಾಲನ್ನು ಧರಿಸಿಯೇ ಮತದಾನ ಮಾಡಿದ್ದಾರೆ.  ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ  ಎಂಬ ಮಾತುಗಳು ಕೇಳಿ ಬಂದಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: