ಕರ್ನಾಟಕಪ್ರಮುಖ ಸುದ್ದಿ

ನಟಿ, ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ

ಬಾಗಲಕೋಟೆ,ನ.2- ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ನಿವಾಸದಲ್ಲಿ ನಿನ್ನೆ ತಡರಾತ್ರಿ ಕಳ್ಳತನವಾಗಿದೆ. ಜಿಲ್ಲೆಯ ರಬಕವಿಯ ವಿದ್ಯಾನಗರದಲ್ಲಿರುವ ನಿವಾಸದಲ್ಲಿ ಕಳ್ಳತನವಾಗಿದೆ.

ತಡರಾತ್ರಿ ಮನೆ ಬೀಗ ಒಡೆದು ಒಳಗೆ ನುಗ್ಗಿರುವ ಕಳ್ಳರು ಮನೆಯೊಳಗಿನ ಟ್ರಿಜರಿ ಒಡೆದಿದ್ದಾರೆ ಎಂದು ತಿಳಿದುಬಂದಿದೆ. ತೇರದಾಳ ಠಾಣೆ ಪೋಲಿಸರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಉಮಾಶ್ರೀ ಬೆಂಗಳೂರಿನ ಅರ್.ಆರ್.ನಗರ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು.

ಉಮಾಶ್ರೀ ಅವರು, ಕಳ್ಳತನವಾಗಿದೆ ಎಂದು ನಮ್ಮ ಹುಡುಗರು ಹೇಳಿದ್ದಾರೆ. ಆದರೆ, ಕಳ್ಳರು ಏನೇನು ಒಯ್ದಿದ್ದಾರೆ ಎಂದು ಗೊತ್ತಿಲ್ಲ. ಬೆಂಗಳೂರಿನಿಂದ ಹೊರಟಿದ್ದೇನೆ. ಸಂಜೆ ತಲುಪಲಿದ್ದೇನೆ. ಮನೆಯಲ್ಲಿ ಪೀಠೋಪಕರಣ, ದಿನ ಬಳಕೆಯ ವಸ್ತುಗಳು ಬಿಟ್ಟರೆ ಬೆಲೆ ಬಾಳುವ ವಸ್ತುಗಳು ಏನೂ ಇರಲಿಲ್ಲ. ಚಿನ್ನಾಭರಣ, ನಗದು ಕೂಡ ಇಟ್ಟಿರಲಿಲ್ಲ ಎಂದು ಉಮಾಶ್ರೀ ತಿಳಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: