ಮೈಸೂರು

ಇವಿಎಂ ಯಂತ್ರ ಬದಲಾವಣೆ : ತಡವಾಗಿ ಆರಂಭಗೊಂಡ ಮತದಾನ

ಕಂಟ್ರೋಲ್ ಯೂನಿಟ್ ಡಿಸ್ಪ್ಲೇ ಸಮಸ್ಯೆಯಿಂದ ಇವಿಎಂ ಯಂತ್ರ ಬದಲಾಯಿಸಿದ್ದರ ಪರಿಣಾಮ ಮತದಾನ ಒಂದು ಗಂಟೆ ತಡವಾಗಿ ಆರಂಭಗೊಂಡ ಘಟನೆ ಚಿನ್ನದ ಹುಂಡಿ ಗ್ರಾಮದಲ್ಲಿ ನಡೆದಿದೆ.
ಚಿನ್ನದ ಗುಡಿ ಹುಂಡಿ ಗ್ರಾಮದಲ್ಲಿ ಮತಗಟ್ಟೆ 76 ರಲ್ಲಿ  ಇವಿಎಂ ಯಂತ್ರ ಬದಲಾಯಿಸಿದ್ದರಿಂದ ತಡವಾಗಿ ಮತದಾನ ಆರಂಭವಾಯಿತು.
ಚುನಾವಣಾ ಅಧಿಕಾರಿಗಳು ಮತಗಟ್ಟೆಗೆ ಆಗಮಿಸಿ ಹೊಸದಾದ ಇವಿಎಂ ಯಂತ್ರವನ್ನು ಅಳವಡಿಸಿದರು. ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದ್ದರಿಂದ ಸರದಿಯ ಸಾಲಿನಲ್ಲಿ ಮತದಾರರು ಮತಚಲಾಯಿಸಲು ನಿಂತಿರುವುದು ಕಂಡು ಬಂತು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: