ಮೈಸೂರು

ವೋಟಿನ ಕಾಗದವನ್ನು ವೋಟಿನ ಪೆಟ್ಟಿಗೆಯಲ್ಲಿ ಹಾಕಿ : ಮತದಾರರಲ್ಲಿ ಗೊಂದಲ ಮೂಡಿಸಿದ ಬರಹ

ಇವಿಎಂ ಯಂತ್ರವಿದ್ದರೂ ವೋಟಿನ ಕಾಗದವನ್ನು ವೋಟಿನ ಪೆಟ್ಟಿಗೆಯಲ್ಲೇ ಹಾಕಿ ಎಂಬ ಚುನಾವಣಾ ಆಯೋಗದ  ಎಚ್ಚರಿಕೆಯ ಫಲಕ ಮತದಾರರಲ್ಲಿ ಗೊಂದಲ ಮೂಡಿಸಿದೆ.

ದೇವನೂರು ಹಾಗೂ ಗೋಳೂರು ಗ್ರಾಮಗಳಲ್ಲಿನ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ಈ ಎಚ್ಚರಿಕೆಯ ನೋಟೀಸ್ ಕಂಡು ಬಂದಿದ್ದು, ಚುನಾವಣಾ ಆಯೋಗವೇ ಖುದ್ದು ಗೊಂದಲದಲ್ಲಿರುವಂತೆ ಕಂಡು ಬರುತ್ತದೆ. ನೋಟೀಸ್ ನಲ್ಲಿ ಏ.9ರ ತಾರೀಖಿನಲ್ಲಿ ಸೀಲ್ ಜೊತೆ ಸಹಿಯೂ ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದೆ. ಮತಗಟ್ಟೆಗೆ ಆಗಮಿಸಿದ ಮತದಾರರು ಈ ಸುತ್ತೋಲೆಯನ್ನು  ನೋಡಿ ಒಮ್ಮೆ ಗೊಂದಲಕ್ಕೆ ಒಳಗಾದರು. ಬಳಿಕ ಇವಿಎಂ ಯಂತ್ರವಿದೆ ಅದರ ಮೂಲಕವೇ ಮತ ಚಲಾಯಿಸಿ ಎಂದು ತಿಳಿಸಿದಾಗ ಗೊಂದಲ ನಿವಾರಣೆಯಾಗಿದೆ.

ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಚುನಾವಣಾ ಆಯೋಗ ಈಗ ಯಾಕೆ ಎಡವಟ್ಟು ನೋಟೀಸು ಲಗತ್ತಿಸಿದೆ, ಖುದ್ದು ಚುನಾವಣಾ ಆಯೋಗವೇ ಗೊಂದಲದಲ್ಲಿ ಬಿದ್ದಿದೆಯೇ ಎಂಬ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಕೇಳಿ ಬಂದಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: