ಮೈಸೂರು

ನವಭಾರತ ನಿರ್ಮಾಣ ಸೇನೆ ವತಿಯಿಂದ ರಾಮನವಮಿ ಆಚರಣೆ

ಮೈಸೂರಿನ  ನವ ಭಾರತ ನಿರ್ಮಾಣ ಸೇನೆ ವತಿಯಿಂದ ರಾಮನವಮಿಯನ್ನು ಹಮ್ಮಿಕೊಳ್ಳಲಾಗಿತ್ತು.

 ಆಗ್ರಹಾರದ ಖಿಲ್ಲೆ ಮೊಹಲ್ಲಾದಲ್ಲಿ ದೇವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರ  ಮೂಲಕ ಮಾಜಿ ಸಚಿವ ರಾಮದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ  ಮಾತನಾಡಿದ ಅವರು, ಈ ಯುವ ಸೇನೆ ಕಳೆದ ನಾಲ್ಕೈದು ವರ್ಷಗಳಿಂದ ರಾಮನವಮಿ ಯನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದು, ಶ್ರೀರಾಮನ ಉತ್ತಮ  ಗುಣಗಳನ್ನು ಯುವ ಪೀಳಿಗೆಯವರು ಆಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ದುಡಿಯಲು ಮುಂದಾಗಿದ್ದಾರೆ. ಈ ದೃಷ್ಟಿಯಿಂದ  ರಾಮನವಮಿಯನ್ನು ಆಚರಣೆ ಮಾಡುತ್ತಿದ್ದಾರೆ ಎಂದರು.

 ನವಭಾರತ ನಿರ್ಮಾಣ ಸೇನೆಯ ಪ್ರಧಾನ ಕಾರ್ಯದರ್ಶಿ ನಿಶಾಂತ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ರಾಮದಾಸ್ ರವರ ನೇತೃತ್ವದಲ್ಲಿರಾಮನವಮಿಯನ್ನು  ಆಚರಿಸುತ್ತಾ ಬಂದಿದ್ದು, ಈ ವರ್ಷವೂ ಮುಂದುವರಿದಿದೆ. ಈ ರಾಮನವಮಿ ಪ್ರಯುಕ್ತ ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸುತ್ತಿದ್ದೇವೆ ಎಂದರು.

ಈ ಸಂದರ್ಭ ಧನಿಷ್, ವಿನಯ್, ಸುಭಾಷ್, ಗಣೇಶ್ ಸೇರಿದಂತೆ ಯುವ ಸೇನೆಯ ಸದಸ್ಯರು   ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: