ಪ್ರಮುಖ ಸುದ್ದಿ

ವ್ಯಕ್ತಿಯಿಂದ ಮೋಸ : ಮನನೊಂದ ಮಹಿಳೆ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನ; ಬಾಲಕಿ ಸಾವು

ರಾಜ್ಯ(ಮಂಡ್ಯ)ನ.3:- ಮದ್ದೂರು ಸಮೀಪದ ಬೋರಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನಂಬಿಸಿ ಮೋಸ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ, ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಈ ಪೈಕಿ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ.
ಗ್ರಾಮದ ಶೋಭಿತಾ(9) ಮೃತಪಟ್ಟ ಬಾಲಕಿ. ಈಕೆಯ ತಾಯಿ ನೇತ್ರಾವತಿ ಹಾಗೂ ಸಹೋದರ ನಂದೀಶ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನೇತ್ರಾವತಿ ಹಲವು ವರ್ಷಗಳ ಹಿಂದೆ ಸೋಮ ಎಂಬವನನ್ನು ಮದುವೆಯಾಗಿದ್ದು ಬಳಿಕ ಗಂಡನನ್ನು ಕಳೆದುಕೊಂಡಿದ್ದ ನೇತ್ರಾವತಿಯನ್ನು ಮದುವೆಯಾಗುವುದಾಗಿ ಆನಂದ್ ಎಂಬಾತ ನಂಬಿಸಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಈತ ಬೇರೆ ಮಹಿಳೆ ಜತೆ ಹೋಗಿ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಇದಲ್ಲದೆ ರಾಜಿ ಪಂಚಾಯಿತಿ ಮಾಡಿದಾಗಲೂ ನ್ಯಾಯ ಸಿಕ್ಕಿರಲಿಲ್ಲ. ಈ ಎಲ್ಲದರಿಂದ ಮನನೊಂದು ಸಂಜೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ನೇತ್ರಾವತಿ ಅತ್ತೆ ಗೌರಮ್ಮ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಪೃಥ್ವಿ, ಸಿಪಿಐ ಶಿವಮಲ್ಲವಯ್ಯ, ಎಸ್ಐ ಶೇಷಾದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: