ಪ್ರಮುಖ ಸುದ್ದಿಮನರಂಜನೆ

ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನ

ರಾಜ್ಯ(ಬೆಂಗಳೂರು)ನ.3:- ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಸೋಮಶೇಖರ ರಾವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ್ದರು. ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಶೇಖರ್ 1981ರಲ್ಲಿ ಚಿತ್ರೋದ್ಯಮ ಪ್ರವೇಶಿಸಿದ್ದರು. ಟಿಎಸ್ ರಂಗಾ ಅವರ “ಸಾವಿತ್ರಿ” ಇವರ ಮೊದಲ ಚಿತ್ರ.

ರವಿ ನಿರ್ದೇಶನದ “ಮಿಥಿಲೆಯ ಸೀತೆಯರು” ಸೋಮಶೇಖರ್ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಅಲ್ಲದೆ ರವಿ ನಿರ್ದೇಶನದ “ಹರಕೆಯ ಕುರಿ”, ಚಿತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಚಿತ್ರರಂಗದ ಗಣ್ಯರು ಸೋಂಶೇಖರ್ ನಿಧನಕ್ಕೆ ಕಂಬನಿ ಮಿಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: