ಮೈಸೂರು

ಬದನವಾಳುವಿನಲ್ಲಿ ನಡೆಯುತ್ತಿದೆ ಶಾಂತಿಯುತ ಮತದಾನ

ನಂಜನಗೂಡು ವಿಧಾನಸಭಾ ಕ್ಷೇತ್ರದ ಬದನವಾಳು ಗ್ರಾಮದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಿಗ್ಗಿನಿಂದಲೇ ಇಲ್ಲಿನ ಗ್ರಾಮಸ್ಥರು ಮತಗಟ್ಟೆಗೆ ಬಂದು, ಸರತಿ ಸಾಲಿನಲ್ಲಿ ನಿಂತು  ಮತ ಚಲಾಯಿಸುತ್ತಿದ್ದಾರೆ.
ಬದನವಾಳು ಗ್ರಾಮ  ಜಿದ್ದಾ ಜಿದ್ದಿನ ರಾಜಕಾರಣಕ್ಕೆ ಹೆಸರಾಗಿತ್ತು. ಬದನವಾಳು ಗ್ರಾಮದಲ್ಲಿ ಹಿಂದೊಮ್ಮೆ ಸವರ್ಣೀಯರು – ದಲಿತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ದಲಿತರ ಕೊಲೆಯಾಗಿತ್ತು. ಪ್ರಕರಣ ಸಂಬಂಧ ಸವರ್ಣೀಯರು ಇಂದಿಗೂ ಜೀವಾವಧಿ ಶಿಕ್ಷೆ ಯನ್ನು ಅನುಭವಿಸುತ್ತಿದ್ದಾರೆ.  ಶ್ರೀನಿವಾಸ ಪ್ರಸಾದ್  ಪ್ರಕರಣ ಸಂಬಂಧ ದಲಿತರ ಪರ ನಿಂತಿದ್ದರು. (ಎಸ್.ಎನ್-ಎಸ್.ಎಚ್)

 

 

 

 

Leave a Reply

comments

Related Articles

error: