ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟ ಫರಾಜ್ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ

ಮುಂಬೈ/ಬೆಂಗಳೂರು,ನ.4-ಬಾಲಿವುಡ್ ನ ಹಿರಿಯ ನಟ ಫರಾಜ್ ಖಾನ್ (50) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಫರಾಜ್​ ಖಾನ್​ ಮೃತಪಟ್ಟ ವಿಷಯವನ್ನು ನಟಿ ಪೂಜಾ ಭಟ್​ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಫರಾಜ್ ಖಾನ್​ ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸುದ್ದಿಯನ್ನು ಅತ್ಯಂತ ಭಾರವಾದ ಹೃದಯದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿರುವ ನಟಿ, ಅವರ ಹಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

ಫರಾಜ್​ಖಾನ್​ಗೆ ಸರ್ಪಸುತ್ತು ಆಗಿತ್ತು. ಅದು ಹೃದಯದಿಂದ ಮಿದುಳಿನವರೆಗೆ ಪಸರಿಸಿತ್ತು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫರಾಜ್​ಖಾನ್ ಚಿಕಿತ್ಸೆಗಾಗಿ ದೇಣಿಗೆಗಳನ್ನೂ ಸಂಗ್ರಹಿಸಲಾಗಿತ್ತು.

ಫರಾಜ್ ಖಾನ್ ಅವರು 90ರ ದಶಕದಲ್ಲಿ ತೆರೆಕಂಡ ಮೆಹಂದಿ, ಫರೇಬ್​​ನಂತಹ ಹಲವು ಜನಪ್ರಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: