ದೇಶಪ್ರಮುಖ ಸುದ್ದಿ

ದೇಶೀಯ ವಿಮಾನಯಾನಕ್ಕೂ ಆಧಾರ್, ಪಾಸ್‍ಪೋರ್ಟ್‍ ಕಡ್ಡಾಯಕ್ಕೆ ಚಿಂತನೆ

ನವದೆಹಲಿ : ಕೇಂದ್ರ ಸರ್ಕಾರವು ದೇಶೀಯ ವಿಮಾನಯಾನಕ್ಕೂ ಆಧಾರ್‍ ಸಂಖ್ಯೆಯನ್ನು ಕಡ್ಡಾಯಗೊಳಿಸಲು ಚಿಂತಿಸಿದೆ. ವಿಮಾನಯಾನ ನಿಷೇಧಿತರ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆ ಮಾಡಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಇಲಾಖೆ ಚಿಂತಿಸಿದೆ.

ಶಿವಸೇನಾ ಸಂಸದ ರವೀಂದ್ರ ಗಾಯಕ್‍ವಾಡ್‍ ಅವರು ವಿಮಾನಯಾನ ಸಿಬ್ಬಂದಿ ಜೊತೆ ದುರ್ವರ್ತನೆ ತೋರಿದ ಹಿನ್ನೆಲೆಯಲ್ಲಿ ಇಂತಹ ಪ್ರಸಂಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸಿದೆ ಎನ್ನಲಾಗಿದೆ.

ಇದಲ್ಲದೆ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಸರಿಸುವ ಭದ್ರತಾ ನಿಯಮಗಳನ್ನೇ ದೇಶಿಯ ವಿಮಾನ ಪ್ರಯಾಣಕ್ಕೂ ಅಳವಡಿಸಲು ಕೇಂದ್ರ ಸರ್ಕಾರ ಚಿಂತಿಸಿದ್ದು, ಇನ್ನು ಮುಂದೆ ದೇಶೀಯ ವಿಮಾನಯಾನಕ್ಕೂ ಪಾಸ್‍ಪೋರ್ಟ್‍ ಮತ್ತು ಆಧಾರ್‍ ಸಂಖ್ಯೆಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿಯಮ ಬದಲಾವಣೆ ಮಾಡಲಿದೆ. ಇದರಿಂದ ವಿಮಾನ ಯಾನದ ವೇಳೆ ದುರ್ವರ್ತನೆ ತೋರುವ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಅವರನ್ನು ನಿಷೇಧಿತರ ಪಟ್ಟಿಗೆ ಸೇರಿಸುವುದು ಸುಲಭವಾಗಲಿದೆ. ಮತ್ತು ಇತರೆ ಪ್ರಯಾಣಿಕರಿಗೆ, ಸಿಬ್ಬಂದಿಗೆ ಪದೇ ಪದೇ ಉಂಟಾಗುವ ಅನಗತ್ಯ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರದ ಯೋಚನೆಯಾಗಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: